ರಾಜ್ಯದ 14 ಪ್ರಮುಖ ಮುಜರಾಯಿ ಇಲಾಖೆಯ ದೇವಾಲಯಗಳ ಸೇವಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಕಳೆದ ಐದು ವರ್ಷಗಳಿಂದ ಸೇವಾ ಶುಲ್ಕ ಪರಿಷ್ಕರಿಸದ ಮತ್ತು ಶುಲ್ಕ ಏರಿಕೆಗೆ ಮನವಿ ಸಲ್ಲಿಸಿದ್ದ ದೇವಾಲಯಗಳ ಸೇವಾ ದರವನ್ನು ಆಗಮ ಪಂಡಿತರ ಪರಿಶೀಲನೆಯ ನಂತರ ಶೇ. 5 ರಿಂದ 10ರವರೆಗೆ ಮತ್ತು ಕೆಲವು ದೇವಾಲಯಗಳಿಗೆ ಶೇ. 15ರವರೆಗೆ ಏರಿಕೆ ಮಾಡಿ ಮುಜರಾಯಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು, ಇದು ದೇವಾಲಯಗಳ ಆಡಳಿತ ಮಂಡಳಿಯ ನಿರ್ಧಾರವಾಗಿದ್ದು, ಸರ್ಕಾರದ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಡಳಿತ ಮಂಡಳಿಗಳ ತೀರ್ಮಾನದ ಅನುಸಾರ ಇಲಾಖೆ ಆದೇಶ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಮುಖ ದೇವಾಲಯಗಳಲ್ಲಿ ದರ ಏರಿಕೆ
ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯ: 2010ರ ನಂತರ ಇದೀಗ ಸೇವಾ ಶುಲ್ಕ ಪರಿಷ್ಕರಿಸಲಾಗಿದ್ದು, ಆಶ್ಲೇಷ ಪೂಜೆ ಮತ್ತು ನಾಗರ ಪ್ರತಿಷ್ಠೆಗೆ ಇದ್ದ ತಲಾ 400 ರೂ. ಸೇವಾ ದರ 500 ರೂ.ಗೆ ಏರಿಕೆಯಾಗಿದೆ.
ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ
ಸೌತಡ್ಕ ಮಹಾಗಣಪತಿ ದೇವಾಲಯ
ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ
ಸೇವಾ ಶುಲ್ಕ ಹೆಚ್ಚಳವಾದ ದೇವಾಲಯಗಳ ಪಟ್ಟಿ:
ಬೆಂಗಳೂರು ನಗರ: ಮಲ್ಲೇಶ್ವರದ ಯೋಗ ನರಸಿಂಹಸ್ವಾಮಿ, ನಂದಿ ತೀರ್ಥ, ಮಹಾಗಣಪತಿ ದೇವಾಲಯ.
ಚಿಕ್ಕಬಳ್ಳಾಪುರ: ವಿಧುರಾಶ್ವಥ ನಾರಾಯಣ ಸ್ವಾಮಿ ಮತ್ತು ತಲಕಾಯ ಬೆಟ್ಟದ ವೆಂಕಟರಮಣ ದೇವಾಲಯ.
ದಕ್ಷಿಣ ಕನ್ನಡ: ಪುತ್ತೂರಿನ ಮಹಾಲಿಂಗೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಮಹಾಗಣಪತಿ ಮತ್ತು ಮಾರಾಳಿಯ ಸೂರ್ಯನಾರಾಯಣ ಸ್ವಾಮಿ ದೇವಾಲಯ.
ಬೆಂಗಳೂರು ದಕ್ಷಿಣ (ರಾಮನಗರ): ದೇವರ ಹೊಸಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯ.
ಚಿತ್ರದುರ್ಗ: ಹೊಸದುರ್ಗ ತಾಲೂಕಿನ ದೇವಪೂರುವಿನ ಹಾಲು ರಾಮೇಶ್ವರ ದೇವಾಲಯ.
ರಾಯಚೂರು: ದೇವಸೂಗೂರಿನ ಸೂಗೂರೇಶ್ವರ ಸ್ವಾಮಿ ದೇವಾಲಯ.
ಉಡುಪಿ: ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯ.
ಕೊಪ್ಪಳ: ಹುಲಿಗಿಯ ಹುಲಿಗೆಮ್ಮ ದೇವಾಲಯ.
ಮಂಡ್ಯ: ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯ.
ಜಾಹೀರಾತುಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments