ಕಡಬ ತಾಲೂಕಿನ ಕಾಯ್ಮಣ , ಕೃಷ್ಣಾಪುರದಲ್ಲಿ ಜೋಕಾಲಿ ಬಳಗ (ರಿ)ವು ಈ ವರ್ಷ ತಮ್ಮ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಿದೆ. ಈ ಉತ್ಸವವು ಸೆಪ್ಟೆಂಬರ್ 21, 2025 ಭಾನುವಾರದಂದು ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8.30ರಿಂದ ಭಜನಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ.
ಸ್ಪರ್ಧೆಗಳ ವಿವರ:
ಪುರುಷರಿಗೆ: ವಾಲಿಬಾಲ್ (ಬೆಳಿಗ್ಗೆ 11.00ಕ್ಕೆ ತಂಡ ರಚನೆ), ಮಡಿಕೆ ಒಡೆಯುವುದು, ಹಾಗೂ ಹಗ್ಗಜಗ್ಗಾಟ (ಸ್ಥಳದಲ್ಲೇ ತಂಡ ರಚನೆ).
ಮಹಿಳೆಯರಿಗೆ: ತ್ರೋಬಾಲ್, ಹಗ್ಗಜಗ್ಗಾಟ, ರಿಂಗ್ ಎಸೆತ, ಮಡಿಕೆ ಒಡೆಯುವುದು ಸಂಗೀತ ಕುರ್ಚಿ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಗಳು.
ಮಕ್ಕಳಿಗೆ (10ನೇ ತರಗತಿ ಒಳಗಿನವರು): ಭಕ್ತಿಗೀತೆ (ಹುಡುಗ ಮತ್ತು ಹುಡುಗಿಯರಿಗೆ), ಮತ್ತು ಕಂಬ ಏರುವುದು (ಹುಡುಗರಿಗೆ), ಕಬಡ್ಡಿ (ವಯಸ್ಸಿನ ಸೂಕ್ತ ದಾಖಲೆಯನ್ನು ಕಡ್ಡಾಯವಾಗಿ ಒದಗಿಸುವುದು)
1 ರಿಂದ 5 ನೇ ತರಗತಿ ಮಕ್ಕಳಿಗೆ: ಕೆರೆ-ದಡ, ಕಬಡ್ಡಿ (ಬಾಲಕರಿಗೆ), ಸಂಗೀತ ಕುರ್ಚಿ (ಬಾಲಕಿಯರಿಗೆ )
5 ವರ್ಷದ ಒಳಗಿನ ಮಕ್ಕಳಿಗೆ : ಮುದ್ದು ಕೃಷ್ಣ ವೇಷ (ಬೆಳಿಗ್ಗೆ ಗಂಟೆ 9:30 ರಿಂದ) ಓಟದ ಸ್ಪರ್ಧೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಳಗವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತುಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments