ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲಾ 70 ವರ್ಷ ತುಂಬಿದವರಿಗೂ ಉಚಿತ ಆರೋಗ್ಯ ಸೇವೆ ನೀಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ. 70 ತುಂಬಿದ ಹಿರಿಯ ನಾಗರಿಕರಿಗೆ ವಯೋ ವಂದನಾ ಯೋಜನೆಯ ಅನುಸಾರ ಆರೋಗ್ಯ ಸೇವೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ 5 ಲಕ್ಷ ರೂ. ಮೊತ್ತದವರೆಗೆ ಉಚಿತವಾಗಿ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತದೆ.
ಈ ಯೋಜನೆಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರ ಯಾವುದೇ ಸ್ತರದವರಾದರೂ 70 ವರ್ಷ ಮೇಲ್ಪಟ್ಟ ವೃದ್ಧರಿಗೆ 5 ಲಕ್ಷ ರೂ. ಮೊತ್ತದವರೆಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲು ಜಾರಿಗೆ ತಂದ ಯೋಜನೆ ಇದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಆನ್‌ಲೈನ್ ಪ್ರಕ್ರಿಯೆ(Online process):
ಅಧಿಕೃತ ವೆಬ್‌ಸೈಟ್: 👉 beneficiary.nha.gov.in ಗೆ ಲಾಗಿನ್ ಮಾಡಿ
ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಬಳಸಿ OTP ಮೂಲಕ ಲಾಗಿನ್
“70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ನೋಂದಣಿ” ಆಯ್ಕೆಮಾಡಿ
ಇ-ಕೆವೈಸಿ ಪೂರ್ಣಗೊಳಿಸಿ (ಆಧಾರ್, OTP ಅಥವಾ ಬಯೋಮೆಟ್ರಿಕ್ ಮೂಲಕ)
ನಿಮ್ಮ ಫೋಟೋ, ವಿಳಾಸ, ಜಿಲ್ಲೆ, ರಾಜ್ಯ ಮುಂತಾದ ಮಾಹಿತಿ ಭರ್ತಿ ಮಾಡಿ
ಕಾರ್ಡ್ ಅನ್ನು PDF ಆಗಿ ಡೌನ್‌ಲೋಡ್ ಮಾಡಬಹುದು
ಆಫ್‌ಲೈನ್ ವಿಧಾನ(Offline method):
ನಿಮ್ಮ ಹತ್ತಿರದ ಆಯುಷ್ಮಾನ್ ಪ್ಯಾನಲ್ ಆಸ್ಪತ್ರೆ ಅಥವಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ನೀಡಿ, ಫೋಟೋ ಮತ್ತು ಬೇಸಿಕ್ ಮಾಹಿತಿ ನೀಡಿ ಸಿಬ್ಬಂದಿ ನಿಮ್ಮ ಕಾರ್ಡ್ ಸಿದ್ಧಪಡಿಸುತ್ತಾರೆ
ಜಾಹೀರಾತುಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments