ಇಂದು ಸಂಜೆ 5ಕ್ಕೆ ಪ್ರಧಾನಿಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ

Modi



 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ.21) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ನಿರೀಕ್ಷೆಯಿದೆ. ಪ್ರಧಾನಿಯವರ ಈ ಭಾಷಣವು ದೇಶದ ಆರ್ಥಿಕ ಸುಧಾರಣೆ, ವಿಶೇಷವಾಗಿ GST 2.0 ದರ ಪರಿಷ್ಕರಣೆಗಳ ಕುರಿತು ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವಲಯದಲ್ಲಿ ವರದಿಯಾಗಿದೆ.


ಹೊಸ GST ವ್ಯವಸ್ಥೆಯಡಿಯಲ್ಲಿ ಈಗಿರುವ ನಾಲ್ಕು ದರ ಸ್ಲ್ಯಾಬ್‌ಗಳನ್ನು ಸರಳಗೊಳಿಸಿ ಎರಡು ಮುಖ್ಯ ಸ್ಲ್ಯಾಬ್‌ಗಳಿಗೆ ಇಳಿಸಲಾಗಿದೆ. ಶೇ.12 ಮತ್ತು ಶೇ.28 ರ ದರಗಳನ್ನು ತೆಗೆದು ಹಾಕಿ, ಶೇ.5 ಮತ್ತು ಶೇ.18 ರಂತೆ ಪ್ರಮಾಣಿತ ದರಗಳನ್ನು ನಿಗದಿಪಡಿಸಲಾಗಿದೆ. ಈ ಬದಲಾವಣೆಗಳು ನಾಳೆ (ಸೆ.22)ರಿಂದ ದೇಶಾದ್ಯಂತ ಜಾರಿಗೆ ಬರಲಿವೆ.

ಸರ್ಕಾರದ ಪ್ರಕಾರ, GST 2.0 ಸುಧಾರಣೆಗಳಿಂದ ಸಾಮಾನ್ಯ ಜನತೆಗೆ ಬೆಲೆ ಇಳಿಕೆ ಸೌಲಭ್ಯ ಸಿಗಲಿದೆ. ಜೊತೆಗೆ MSMEಗಳು, ರೈತರು, ಮಧ್ಯಮ ವರ್ಗ ಹಾಗೂ ಉದ್ಯಮಿಗಳಿಗೆ ತೆರಿಗೆ ವ್ಯವಸ್ಥೆ ಇನ್ನಷ್ಟು ಸುಲಭವಾಗಲಿದೆ. “Ease of Living ಮತ್ತು Ease of Doing Business” ಗುರಿಯನ್ನು ಸಾಧಿಸುವತ್ತ ಈ ಪರಿಷ್ಕರಣೆ ಪ್ರಮುಖ ಹೆಜ್ಜೆ ಎಂದೂ ವಲಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿಯವರ ಭಾಷಣದ ಬಳಿಕ GST 2.0 ಜಾರಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಬೆಳಕು ಕಾಣುವ ನಿರೀಕ್ಷೆಯಿದೆ.

Post a Comment

0 Comments