ವಿಜಯದಶಮಿ: ವಿಜಯದ ಸಂಕೇತ
ನವರಾತ್ರಿಯ ಹತ್ತನೇ ದಿನದಂದು ಆಚರಿಸಲಾಗುವ ವಿಜಯದಶಮಿಯು ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಪುರಾಣಗಳ ಪ್ರಕಾರ, ದುರ್ಗಾ ದೇವಿಯು ಒಂಬತ್ತು ದಿನಗಳ ಕಾಲ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡಿ ಹತ್ತನೇ ದಿನ ಅವನನ್ನು ಸಂಹರಿಸುತ್ತಾಳೆ. ಈ ವಿಜಯದ ಕಾರಣದಿಂದ ಈ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.
ನವರಾತ್ರಿ ಮೊದಲ ದಿನ: ಶೈಲಪುತ್ರಿ ಪೂಜೆ
ನವರಾತ್ರಿಯ ಮೊದಲ ದಿನವನ್ನು ಶೈಲಪುತ್ರಿ ದೇವಿಯ ಆರಾಧನೆಗೆ ಮೀಸಲಿಡಲಾಗಿದೆ. ಶೈಲಪುತ್ರಿಯನ್ನು ಪೂಜಿಸುವ ಮೂಲಕ ಭಕ್ತರು ನವರಾತ್ರಿಯ ಉಪವಾಸವನ್ನು ಪ್ರಾರಂಭಿಸುತ್ತಾರೆ.
ಶೈಲಪುತ್ರಿ ಯಾರು?
ಶೈಲಪುತ್ರಿಯು ಪರ್ವತ ರಾಜ ಹಿಮವಂತನ ಮಗಳು. ಈಕೆಯು ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಮಗಳಾದ ದಾಕ್ಷಾಯಿಣಿ ಆಗಿದ್ದಳು. ದಕ್ಷನು ತನ್ನ ಯಜ್ಞಕ್ಕೆ ಶಿವ ಮತ್ತು ದಾಕ್ಷಾಯಿಣಿಯನ್ನು ಆಹ್ವಾನಿಸಿದೆ, ಶಿವನನ್ನು ಅವಮಾನಿಸಿದನು. ಇದರಿಂದ ಮನನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ನಂತರದ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ಪಾರ್ವತಿ ಎಂದೂ ಕರೆಯಲ್ಪಡುತ್ತಾಳೆ. ಈ ಸಂಧರ್ಭದಲ್ಲಿ ಹೆಣ್ಣುಮಕ್ಕಳನ್ನು ಆಹ್ವಾನಿಸಿ ಗೌರವಿಸುವ ಸಂಪ್ರದಾಯ ಆಚರಣೆಯಲ್ಲಿದೆ.
ಶೈಲಪುತ್ರಿಯು ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುತ್ತಾಳೆ. ವೃಷಭ (ಗೂಳಿ) ಈಕೆಯ ವಾಹನವಾಗಿದೆ. ದೇವಾನುದೇವತೆಗಳ ಇರ್ಷೆಯನ್ನು ಈಕೆ ನಿಯಂತ್ರಿಸುತ್ತಾಳೆ ಎಂದು ಉಪನಿಷತ್ತುಗಳು ಹೇಳುತ್ತವೆ.
ಶೈಲಪುತ್ರಿ ಪೂಜಾ ವಿಧಾನ ಮತ್ತು ಮಹತ್ವ
ಶೈಲಪುತ್ರಿಯ ಪೂಜೆಯನ್ನು ಆರಂಭಿಸಲು, ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಬೇಕು. ಪೂಜಾ ಸ್ಥಳವನ್ನು ಪೂರೈಸಿ, ಪೂಜೆಗೆ ಬೇಕಾದ ಹೂವು, ಹಣ್ಣು, ಮತ್ತು ಸಿಹಿ ಪದಾರ್ಥಗಳನ್ನು ಇಟ್ಟುಕೊಳ್ಳಬೇಕು. ಶುದ್ಧವಾದ ತುಪ್ಪದಿಂದ ಮಾಡಿದ ಪ್ರಸಾದವನ್ನು ದೇವಿಗೆ ಅರ್ಪಿಸಬೇಕು. ಈ ದಿನ ಮಲ್ಲಿಗೆ ಹೂವು ಮತ್ತು ಬಿಳಿ ಅಥವಾ ಹಳದಿ ಬಣ್ಣದ ಬಟ್ಟೆಗಳಿಗೆ ಹೆಚ್ಚಿನ ಮಹತ್ವವಿದೆ.
ಶೈಲಪುತ್ರಿಯು ಮೂಲಾಧಾರ ಚಕ್ರದ ದೇವತೆ, ಇದು ಸ್ಥಿರತೆ ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಈಕೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಜೀವನದ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವ ಶಕ್ತಿ ದೊರೆಯುತ್ತದೆ. ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ, ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುತ್ತದೆ.
ಜಾಹೀರಾತುಗಾಗಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments