ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

 

Apply
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ 2025-26ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿ ಬ್ರಾಹ್ಮಣ ಸಮುದಾಯದವರಿಗೆ ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ಸಹಾಯ ನೀಡಲಾಗುತ್ತದೆ.

​ಈ ಯೋಜನೆಯ ಮುಖ್ಯ ಉದ್ದೇಶ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಲು ನೆರವು ನೀಡುವುದು. ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಮತ್ತು ಟ್ಯಾಕ್ಸಿ ಮುಂತಾದ ವ್ಯವಹಾರಗಳನ್ನು ಆರಂಭಿಸಲು ಈ ಸಾಲ ಲಭ್ಯವಿದೆ.

​ಯೋಜನೆಯ ಪ್ರಮುಖಾಂಶಗಳು:

​ಸಾಲದ ಮೊತ್ತ: ಕನಿಷ್ಠ 1 ಲಕ್ಷ ರೂ. ಮತ್ತು ಗರಿಷ್ಠ 2 ಲಕ್ಷ ರೂ.

​ಬಡ್ಡಿ ದರ: ವಾರ್ಷಿಕ ಶೇ. 4.

​ಅರ್ಹತೆಗಳು:

​ಅರ್ಜಿದಾರರು ಬ್ರಾಹ್ಮಣ ಸಮುದಾಯದವರಾಗಿರಬೇಕು ಮತ್ತು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (EWS) ಹೊಂದಿರಬೇಕು. (8 ಲಕ್ಷ ರೂ. ಆದಾಯ ಮಿತಿ)

​ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

​ವಯಸ್ಸು 18 ರಿಂದ 65 ವರ್ಷದೊಳಗಿರಬೇಕು.

​ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶ.

​ಮಹಿಳೆಯರಿಗೆ ಶೇ. 33 ಮತ್ತು ವಿಶೇಷಚೇತನರಿಗೆ ಶೇ. 5 ಮೀಸಲಾತಿ ಇದೆ.

​ಅರ್ಜಿದಾರರ ಆಧಾರ್ ಸಂಖ್ಯೆಯು ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು.

​ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2025 ಕೊನೆಯ ದಿನ. ಅರ್ಜಿದಾರರು ksbdb.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, 8762249230 ಸಹಾಯವಾಣಿಗೆ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಕರೆ ಮಾಡಬಹುದು. 


ಜಾಹೀರಾತುಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Post a Comment

0 Comments