ಚೊಕ್ಕಾಡಿ ಸಮೀಪ ಶೇಣಿ ಬಳಿ ಇಂದು ಮಧ್ಯಾಹ್ನ ಗಂಭೀರ ಅಪಘಾತ ಸಂಭವಿಸಿದೆ. ಚೊಕ್ಕಾಡಿಯಿಂದ ಶೇಣಿ ಮಾರ್ಗವಾಗಿ ಕೊಂಡೆಬಾಯಿಗೆ ಬಾಡಿಗೆಗೆ ತೆರಳಿ ಹಿಂತಿರುಗುತ್ತಿದ್ದ ರಿಕ್ಷಾ, ಶೇಣಿ ಸಮೀಪದ ಕುಳ್ಳಾಜೆ ಚೆಡಾವು ಇಳಿಯುವಾಗ ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿದೆ. ಪರಿಣಾಮ, ಗುಡ್ಡೆಯಿಂದ ರಿಕ್ಷಾ ಸುಮಾರು 25 ಅಡಿ ಆಳದ ಮನೆಯಂಗಳಕ್ಕೆ ಪಲ್ಟಿಯಾಗಿ ಬಿದ್ದಿದೆ.
ಈ ಘಟನೆದಲ್ಲಿ ರಿಕ್ಷಾ ಸಂಪೂರ್ಣ ಜಖಂ ಗೊಂಡಿದ್ದು, ಚಾಲಕ ಭಾಸ್ಕರ ಆಚಾರ್ಯ (ಕುಕ್ಕುಜಡ್ಕ) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಕಾಲು, ಸೊಂಟ ಮತ್ತು ತಲೆಗೆ ತೀವ್ರ ಏಟಾಗಿದ್ದು, ಸ್ಥಳೀಯರ ನೆರವಿನಿಂದ 108 ಅಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.


0 Comments