ಉಡುಪಿ ವಿಟ್ಲ ಪಿಂಡಿ ಉತ್ಸವದಲ್ಲಿ ವಿರಾಟ್ ಕೊಹ್ಲಿ!?

Virat

 

ಕೃಷ್ಣನಗರಿ ಉಡುಪಿಯಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಉತ್ಸಾಹಭರಿತವಾಗಿ ಜರಗಿತು. ಕರಾವಳಿಯ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯಾದ ವಿಟ್ಲ ಪಿಂಡಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಸಂಭ್ರಮಿಸಿದರು.


ಪ್ರತಿ ವರ್ಷ ನಡೆದಂತೆ ಈ ಬಾರಿ ಕೂಡ ಉತ್ಸವಕ್ಕೆ ಮಠದ ಯತಿಗಳು, ಸಿಬ್ಬಂದಿಗಳು ಹಾಗೂ ಗೊಲ್ಲರು ಮಡಿಕೆ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಪರ್ಯಾಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸೇರಿದಂತೆ ಅಷ್ಟಮಠದ ಸ್ವಾಮೀಜಿಗಳು ರಥೋತ್ಸವದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹುಲಿವೇಷ, ಯಕ್ಷಗಾನ ಸೇರಿದಂತೆ ನಾನಾ ವೇಷಭೂಷಣಗಳಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.


 ಈ ಬಾರಿ ವಿಶೇಷ ಆಕರ್ಷಣೆ ಎಂದರೆ, ಭಾರತ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿಯಂತೆಯೇ ಕಾಣುವ ಒಬ್ಬ ಯುವಕ. ಅವರು ಆರ್‌ಸಿಬಿ ಟೀಶರ್ಟ್ ತೊಟ್ಟು, ಕೈಯಲ್ಲಿ ಐಪಿಎಲ್ ಕಪ್ ಹಿಡಿದು ಮೆರವಣಿಗೆಯಲ್ಲಿ ನಿಂತಿದ್ದರು. ಇದನ್ನು ಕಂಡ ಭಕ್ತರಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ, ನಿಜವಾದ ವಿರಾಟ್ ಕೊಹ್ಲಿಯೇ ಉಡುಪಿಗೆ ಆಗಮಿಸಿದ್ದಾರೆ ಎಂಬ ಗಾಸಿಪ್ ಹರಡಿತು.


ಆದರೆ ನಿಜದಲ್ಲಿ ಅವರು ವಿರಾಟ್ ಕೊಹ್ಲಿಯ ತದ್ರೂಪ ರೂಪದಂತೆ ಕಾಣುವ ವ್ಯಕ್ತಿ. ವಿಶೇಷವಾಗಿ ಅಲಂಕರಿಸಿದ ರಥದಲ್ಲಿ "ಕೊಹ್ಲಿ", "ಗೇಲ್" ಮತ್ತು "ದಾನಿಶ್ ಸೇಠ್" ಪಾತ್ರಧಾರಿಗಳು ನಿಂತಿದ್ದು ಜನರನ್ನು ಮನರಂಜಿಸಿದರು.


ಉಡುಪಿ ರಥಬೀದಿ ಎರಡು ದಿನಗಳ ಕಾಲ ಸಂಭ್ರಮದಲ್ಲಿ ತೇಲಿತು. ವಿಟ್ಲ ಪಿಂಡಿ ಉತ್ಸವ ಉಡುಪಿ ಕೃಷ್ಣಮಠದಲ್ಲಿ ಪ್ರತಿವರ್ಷವೂ ವೈಭವದಿಂದ ಆಚರಿಸಲಾಗುತ್ತಿದ್ದು, ಪರ್ಯಾಯ ಮಹೋತ್ಸವದ ಹೊರತಾಗಿ ಅತ್ಯಂತ ಜನಪ್ರಿಯ ಧಾರ್ಮಿಕ ಹಬ್ಬವೆಂದು ಪರಿಗಣಿಸಲಾಗಿದೆ.


ಜಾಹೀರಾತುಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments