ರೈಲು ಹಳಿ ವಿದ್ಯುದೀಕರಣ ಯೋಜನೆ ಪೂರ್ಣ, ಮಂಗಳೂರು- ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ರೈಲು ಸಂಚಾರ ಪ್ರಾರಂಭ

 

Railway
ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆಯು ಪೂರ್ಣಗೊಂಡು,ಇದೀಗ ಸೆಪ್ಟೆಂಬರ್ 15ರಿಂದ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಿದೆ. ಈ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಮಂಗಳೂರು - ಸುಬ್ರಹ್ಮಣ್ಯ ಲೋಕಲ್ ಪೇಸೆಂಜರ್ ವಿದ್ಯುತ್ ಚಾಲಿತ ರೈಲು ಮೊದಲ ಬಾರಿಗೆ (Electric train) ಅತೀ ವೇಗವನ್ನು ಹೊಂದಿದೆ ಯಲ್ಲದೇ ಶಬ್ದರಹಿತವಾಗಿ ಸಂಚಾರ ಪ್ರಾರಂಭಿಸಿದೆ .

ಮುಂಜಾನೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸುಬ್ರಹ್ಮಣ್ಯ ರೋಡ್ ತಲುಪುವ ಪ್ಯಾಸೆಂಜರ್ ರೈಲು ಅಲ್ಲಿಂದ ಮರಳಿ ಮಂಗಳೂರು ತಲುಪುತ್ತಿದೆ. ಇದೇ ರೈಲು ಸಂಜೆಯೂ ಇದೇ ರೀತಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬಂದು ರಾತ್ರಿ ಮಂಗಳೂರಿಗೆ ನಿರ್ಗಮಿಸುತ್ತದೆ.

ಇವೆರಡು ಸೇವೆಗಳಲ್ಲದೇ ಮಧ್ಯಾಹ್ನವೂ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಸೇವೆಯಿದ್ದು, ಈ ಮೂರು ಸಮಯದ ರೈಲುಗಳು ಸೆಪ್ಟೆಂಬರ್ 15ರಿಂದ ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ. ರೈಲ್ವೇ ಇಲಾಖೆಯು ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. 

2025ರ ಏಪ್ರಿಲ್ 12ರಂದು ಮಂಗಳೂರು ಪುತ್ತೂರು ನಡುವಿನ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ವಿಸ್ತರಿಸಿ, ರೈಲ್ವೆ ಇಲಾಖೆ ಐತಿಹಾಸಿಕ ಕ್ರಮ ಕೈಗೊಂಡಿತ್ತು. ಈ ವಿಸ್ತರಣೆಗೆ ಪ್ರಯಾಣಿಕರಿಂದ ಉತ್ಸಾಹಭರಿತ ಸ್ಪಂದನೆ ದೊರೆತಿದ್ದು, ಪ್ರತಿದಿನ ನೂರಾರು ಜನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟು, ಐದು ಬೋಗಿಗಳ ರೈಲಿಗೆ ಹೆಚ್ಚುವರಿ ಬೋಗಿ ಜೋಡಿಸುವಂತೆ ಒತ್ತಾಯವೂ ಎದ್ದಿದೆ.


ಜಾಹೀರಾತುಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp



Post a Comment

0 Comments