ಕುದ್ಮಾರು: ತಿರಂಗಾ ವಾರಿಯರ್ಸ್ (ರಿ.) ಕುದ್ಮಾರು ಇದರ ವತಿಯಿಂದ ಅಕ್ಟೋಬರ್ 12, 2025ರ ಆದಿತ್ಯವಾರದಂದು 7 ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯು ಬೆಳಿಗ್ಗೆ 9:30ಕ್ಕೆ ಕುದ್ಮಾರು ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು:
* ಪ್ರಥಮ ಬಹುಮಾನ: ₹ 7,000/- ನಗದು ಮತ್ತು ಆಕರ್ಷಕ ಟ್ರೋಫಿ
* ದ್ವಿತೀಯ ಬಹುಮಾನ: ₹ 3,000/- ನಗದು ಮತ್ತು ಟ್ರೋಫಿ
* ತೃತೀಯ ಬಹುಮಾನ: ಟ್ರೋಫಿ
ಇದರ ಜೊತೆಗೆ, ವೈಯಕ್ತಿಕ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟ್ಸ್‌ಮ್ಯಾನ್, ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿಗಳನ್ನು ಸಹ ನೀಡಲಾಗುವುದು.
ನೋಂದಣಿ ಮತ್ತು ನಿಯಮಗಳು
ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳಿಗೆ ಪ್ರವೇಶ ಶುಲ್ಕ ₹ 1000/- ಎಂದು ನಿಗದಿಪಡಿಸಲಾಗಿದೆ. ನೋಂದಣಿಗಾಗಿ ಅಕ್ಟೋಬರ್ 10, 2025ರ ಒಳಗೆ ಪ್ರವೇಶ ಶುಲ್ಕವನ್ನು ಪಾವತಿಸಿ ತಂಡವನ್ನು ನೋಂದಾಯಿಸಬೇಕು.
ಪ್ರಮುಖ ನಿಯಮಗಳು:
* ಅಂಪೈರ್ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
* ಯಾವುದೇ ಚರ್ಚೆಕಂಡು ಬಂದಲ್ಲಿ ತಂಡದ ನಾಯಕರಿಗೆ ಮಾತ್ರ ಮಾತನಾಡಲು ಅವಕಾಶ
* ಪಂದ್ಯಾಟ ಸಮಬಲಗಂಡಲ್ಲಿ ಟಾಸ್ ಮೂಲಕ ವಿಜಯಿ ತಂಡವನ್ನು ಘೋಷಿಸಲಾಗುವುದು
* ಪಂದ್ಯಾಟವು ಬೆಳಿಗ್ಗೆ ಗಂಟೆ 9.30ಕ್ಕೆ ಪ್ರಾರಂಭವಾಗುವುದು.
* ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ತಂಡ ಹಾಜರಿರದಿದ್ದಲ್ಲಿ ಪಂದ್ಯಾಟದಿಂದ ಹೊರಗಿಡಲಾಗುವುದು.
* ಲೆಗ್ ಸ್ಪಿನ್ ಮಾದರಿಯ ಬೌಲಿಂಗ್‌ಗೆ ಮಾತ್ರ ಅವಕಾಶ
* ಮೊದಲು ಬಂದ 16 ತಂಡಗಳನ್ನು A ಫೂಲ್‌ನಲ್ಲಿ ಆಡಿಸಲಾಗುವುದು.
* ದಿನಾಂಕ 10-10-2025ರ ಒಳಗೆ ಪ್ರವೇಶ ಶುಲ್ಕ ನೀಡಿ ನೋಂದಾಯಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಮತ್ತು ತಂಡಗಳನ್ನು ನೋಂದಾಯಿಸಲು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
📞 9964063048 / 7026547447 / 9945086103 / 9353133164
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp
.jpg)

0 Comments