ಮಂಗಳೂರು: ಯುವತಿಯರ ಗೌಪ್ಯ ವಿಡಿಯೋ ವೈರಲ್ ಪ್ರಕರಣ – ರೂಮ್‌ಮೇಟ್‌ ನಿರೀಕ್ಷಾ ಬಂಧನ

 

Ad
ಮಂಗಳೂರು: ತಮ್ಮ ಜೊತೆ ವಾಸವಿದ್ದ ಯುವತಿಯರ ಬಟ್ಟೆ ಬದಲಾಯಿಸುವ ಗೌಪ್ಯ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವೈರಲ್ ಮಾಡಿದ ಗಂಭೀರ ಆರೋಪದ ಮೇಲೆ ನಿರೀಕ್ಷಾ ಎಂಬ ಯುವತಿಯನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸಾ ಮೂಲದ ನಿರೀಕ್ಷಾ, ಮಂಗಳೂರಿನ ಕುಡೋರಿಗುಡ್ಡೆ ಪ್ರದೇಶದ ಬಾಡಿಗೆ ಮನೆಯಲ್ಲಿ ಉದ್ಯೋಗದಲ್ಲಿದ್ದ ಇಬ್ಬರು ಯುವತಿಯರೊಂದಿಗೆ ವಾಸವಾಗಿದ್ದಳು. ಇದೇ ಸಂದರ್ಭದಲ್ಲಿ, ಆಕೆ ತನ್ನ ರೂಮ್‌ಮೇಟ್‌ಗಳ ಖಾಸಗಿ ದೃಶ್ಯಗಳನ್ನು ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ್ದಳು ಎನ್ನಲಾಗಿದೆ.

Ad

ಬ್ಲ್ಯಾಕ್‌ಮೇಲ್‌ ಆರೋಪ, ಯುವಕನ ಆತ್ಮಹತ್ಯೆ:

ತನಿಖೆಯ ಪ್ರಕಾರ, ನಿರೀಕ್ಷಾ ಈ ವಿಡಿಯೋಗಳನ್ನು ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ, ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್ ಎಂಬ ಯುವಕನಿಗೆ ಕಳುಹಿಸಿದ್ದಳು.

ಆದರೆ, ಅಕ್ಟೋಬರ್ 9 ರಂದು ಅಭಿಷೇಕ್ ಕಾರ್ಕಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮೊದಲು ಬರೆದ ಡೆತ್ ನೋಟ್‌ನಲ್ಲಿ ನಿರೀಕ್ಷಾ ಸೇರಿದಂತೆ ಕೆಲವರ ವಿರುದ್ಧ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್‌ ಆರೋಪಗಳನ್ನು ಸೇರಿಸಿದ್ದಾನೆ. ಅಲ್ಲದೆ, ನಿರೀಕ್ಷಾ ತನ್ನ ರೂಮ್‌ಮೇಟ್‌ಗಳ ಗೌಪ್ಯ ದೃಶ್ಯಗಳನ್ನು ವೈರಲ್ ಮಾಡಿರುವ ಬಗ್ಗೆಯೂ ಉಲ್ಲೇಖಿಸಿದ್ದಾನೆ.

'ಟೂತ್ ಗ್ರೂಪ್‌'ನಲ್ಲಿ ವಿಡಿಯೋ ಶೇರ್:

ಸಾಯುವ ಮುನ್ನ ಅಭಿಷೇಕ್ 'ಟೂತ್ ಗ್ರೂಪ್' ಎಂಬ ಹೆಸರಿನ ವಾಟ್ಸಪ್ ಗುಂಪನ್ನು ರಚಿಸಿ, ಆ ಯುವತಿಯರ ಗೌಪ್ಯ ವಿಡಿಯೋಗಳು ಸೇರಿದಂತೆ ಕೆಲವು ಸಂವೇದನಾಶೀಲ ದೃಶ್ಯಗಳನ್ನು ಹಂಚಿಕೊಂಡಿದ್ದನು.

ವಿಡಿಯೋಗಳು ವೈರಲ್ ಆದ ನಂತರ, ಸಂತ್ರಸ್ತ ಯುವತಿಯರು ಕದ್ರಿ ಪೊಲೀಸ್ ಠಾಣೆಯಲ್ಲಿ ನಿರೀಕ್ಷಾ ವಿರುದ್ಧ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ನಿರೀಕ್ಷಾಳನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 77, 78(2) ಮತ್ತು 294(2)(ಎ)ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಸುಮಾರು ಒಂದು ವರ್ಷದ ಹಿಂದೆ ಚಿತ್ರೀಕರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ, ಕಾರ್ಕಳ ಪೊಲೀಸರು ಅಭಿಷೇಕ್‌ನ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ಮುಂದುವರೆಸಿದ್ದಾರೆ.

For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp



Post a Comment

0 Comments