ರಾಜ್ಯ ಮಟ್ಟದ ಒಲಂಪಿಕ್ ಕಬಡ್ಡಿ: ದ.ಕ. ಜಿಲ್ಲಾ ತಂಡಕ್ಕೆ ಆಲಂಕಾರು ಭಾರತಿ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆ

 

Ad
ಪುತ್ತೂರು: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ರಾಜ್ಯ ಮಟ್ಟದ ಒಲಂಪಿಕ್ ಕಬಡ್ಡಿ ಪಂದ್ಯಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಲು ಆಲಂಕಾರು ಭಾರತಿ ವಿದ್ಯಾಸಂಸ್ಥೆಯ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್‌ ಅಸೋಶಿಯೇಷನ್ ಸಹಯೋಗದಲ್ಲಿ ಈ ಪ್ರತಿಷ್ಠಿತ ಪಂದ್ಯಾಟ ಆಯೋಜನೆಯಾಗಿದೆ.

Ad

Ad


ಆಯ್ಕೆಯಾದ ವಿದ್ಯಾರ್ಥಿನಿಯರು:

 ತೃಷಾ ಕೋಡಂದೂರು: (ಚಾರ್ವಾಕ ಕೋಡಂದೂರು ನಿವಾಸಿ ದಿ. ದಾಮೋದರ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ).

 ಧನ್ಯಶ್ರೀ ಕುಂತೂರು: (ಕುಂತೂರು ಅರ್ಬಿ ನಿವಾಸಿ ಲೋಕೇಶ್ ಗೌಡರ ಪುತ್ರಿ).

ಈ ಇಬ್ಬರು ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲೆಯ ಪರವಾಗಿ ರಾಜ್ಯ ಮಟ್ಟದಲ್ಲಿ ಸೆಣಸಲಿದ್ದಾರೆ.

ವಿದ್ಯಾರ್ಥಿನಿಯರ ಈ ಸಾಧನೆಯ ಹಿಂದೆ ಶಾಲಾ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ, ಮುಖ್ಯ ಮಾತಾಜಿ ಆಶಾ ಎಸ್.ರೈ ಮತ್ತು ಮುಖ್ಯ ಸತೀಶ್ ಕುಮಾರ್ ಜಿ.ಆರ್.ಬಲ್ಯ ಅವರ ಸೂಕ್ತ ಮಾರ್ಗದರ್ಶನವಿದೆ. ಅಲ್ಲದೆ, ದೈಹಿಕ ಶಿಕ್ಷಕ ಚಂದ್ರಹಾಸ ಕೆ.ಸಿ. ಕುಂಟ್ಯಾನ ಅವರು ತೀವ್ರ ತರಬೇತಿಯನ್ನು ನೀಡಿದ್ದಾರೆ.

ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶಾಲಾ ವತಿಯಿಂದ ಹಾಗೂ ಸ್ಥಳೀಯ ಗಣ್ಯರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.


Post a Comment

0 Comments