ದೋಣಿಮಕ್ಕಿ ಕುಕ್ಕೆ ಶ್ರೀ ನಿಲಯದಲ್ಲಿ ಗಣಹೋಮ; ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಾಧಕರಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ

 

Ad
ಸುಬ್ರಹ್ಮಣ್ಯ: ಖ್ಯಾತ ಉದ್ಯಮಿ, ಸಮಾಜ ಸೇವಕ, ಚಲನಚಿತ್ರ ನಟ, ನಿರ್ಮಾಪಕ ಹಾಗೂ ಅಖಿಲ ಭಾರತ ಬಿಲ್ಲವ ಮಹಾಮಂಡಲದ ಮುಲ್ಕಿ ಅಧ್ಯಕ್ಷರಾದ ಡಾ. ರಾಜಶೇಖರ ಕೋಟ್ಯಾನ್‌ ಅವರನ್ನು ಇಲ್ಲಿನ ದೋಣಿಮಕ್ಕಿ ಕುಕ್ಕೆ ಶ್ರೀ ನಿಲಯದ ಸಭಾಂಗಣದಲ್ಲಿ ಶುಕ್ರವಾರ ಗೌರವಿಸಲಾಯಿತು.

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಸೀನಿಯರ್ ಚೇಂಬ‌ರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್‌ ವತಿಯಿಂದ ಈ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

"ಡಾ. ರಾಜಶೇಖರ ಕೋಟ್ಯಾನ್‌ ಅವರು ಸಮಾಜಕ್ಕೆ ಸಲ್ಲಿಸಿದ ಅಮೋಘ ಸೇವೆ, ಚಲನಚಿತ್ರ ರಂಗದಲ್ಲಿನ ಕೊಡುಗೆ ಮತ್ತು ಬಡವರಿಗಾಗಿ ಸದಾ ದುಡಿಯುತ್ತಿರುವ ಅವರ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ" ಎಂದು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ರವಿ ಕಕ್ಕೆಪದವು ಅವರ ದೋಣಿಮಕ್ಕಿಯ ಕುಕ್ಕೆಶ್ರೀ ನಿಲಯದಲ್ಲಿ ಬೆಳಿಗ್ಗೆ ಗಣಹೋಮ ಮತ್ತು ಮಧ್ಯಾಹ್ನ ಸತ್ಯನಾರಾಯಣ ಪೂಜಾ ಕಾರ್ಯಕ್ರಮಗಳು ನೆರವೇರಿದವು.

Ad

ಸಮಾಜ ಸೇವಕರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸದಾ ನಿರತರಾಗಿರುವ ಮತ್ತು ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ರಕ್ತದಾನದ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವ ಬೆಳ್ತಂಗಡಿ ಮಚ್ಚಿನದವರಾದ 'ನೆತ್ತರ ಗೋಪಾಲಕೃಷ್ಣ ಶೆಟ್ಟಿ' ಹಾಗೂ 'ಆಪತ್ತು ರಕ್ಷಕ, ಬಡವರ ಬಂಧು' ಎಂದೇ ಪರಿಚಿತರಾಗಿರುವ ಬೆಳ್ತಂಗಡಿ ಕಣಿಯೂರಿನ ಅಶೋಕ ಕುಲಾಲ್‌ ಅವರನ್ನು ಕೂಡ ಅಭಿನಂದಿಸಿ ಸನ್ಮಾನಿಸಲಾಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್‌ ನೆಕ್ರಾಜೆ, ರೋಟರಿ ಕ್ಲಬ್ ಸುಬ್ರಹ್ಮಣ್ಯದ ಅಧ್ಯಕ್ಷ ಜಯಪ್ರಕಾಶ್‌, ಸೀನಿಯರ್ ಚೇಂಬ‌ರ್ ಸುಬ್ರಹ್ಮಣ್ಯ ಲಿಜನ್‌ ಅಧ್ಯಕ್ಷ ವೆಂಕಟೇಶ ಹೆಚ್.ಎಲ್, ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು, ಸುಬ್ರಹ್ಮಣ್ಯದ ಉದ್ಯಮಿ ಯಜೇಶ್ ಆಚಾ‌ರ್, ಪುತ್ತೂರು ಅಕ್ಷಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲು, ಮುಲ್ಕಿ ಬಿಲ್ಲವ ಸಂಘದ ಪದಾಧಿಕಾರಿಗಳಾದ ಸಂತೋಷ್, ದಿನೇಶ್, ಬಳ್ಳದ ಉಮೇಶ್‌, ಲಕ್ಷ್ಮಣ ಪೂಜಾರಿ, ಮುದಲಾದಿ ಪದ್ಮ ಪೂಜಾರಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp


Post a Comment

0 Comments