ಸುಳ್ಯದ ವ್ಯಕ್ತಿಗೆ ಕ್ರಿಪ್ಟೋ ಹೂಡಿಕೆಯ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

 

Ad
ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯು ಕ್ರಿಪ್ಟೋಕರೆನ್ಸಿ ಹೂಡಿಕೆ ಮತ್ತು ಟ್ರೇಡಿಂಗ್‌ ಹೆಸರಿನಲ್ಲಿ ಸುಳ್ಯ ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಮಂಗಳೂರು ಸೈಬರ್ ಎಕಾನಾಮಿಕ್ಸ್ ಆಂಡ್ ನಾರ್ಕೋಟಿಕ್ಸ್ (ಸೆನ್) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Ad


ವಂಚನೆಗೊಳಗಾದವರು ಸುಳ್ಯದ ಕೆರೆಮೂಲೆ ನಿವಾಸಿಯಾದ 50 ವರ್ಷದ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ಮೊಬೈಲ್‌ನಲ್ಲಿ ಚಾಟ್‌ಜಿಪಿಟಿ ಮೂಲಕ ಒಂದು ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಆ್ಯಪ್ ಮೂಲಕ ಇವರಿಗೆ 'ಇಶಾ ಸಿಂಗ್' ಎಂಬ ವ್ಯಕ್ತಿಯ ಪರಿಚಯವಾಗಿದೆ. ನಂತರ ಅವರಿಬ್ಬರು ಟೆಲಿಗ್ರಾಂನಲ್ಲಿ ಚಾಟ್ ಮಾಡಲು ಶುರುಮಾಡಿದ್ದರು.

ಈ ವೇಳೆ, ಇಶಾ ಸಿಂಗ್ ಅವರು ದೂರುದಾರರಿಗೆ ಕ್ರಿಪ್ಟೋಕರೆನ್ಸಿ ಇನ್‌ವೆಸ್ಟ್‌ಮೆಂಟ್‌ (ಹೂಡಿಕೆ) ಮತ್ತು ಟ್ರೇಡಿಂಗ್‌ (ವ್ಯಾಪಾರ) ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ಅದನ್ನು ನಂಬಿದ ಸುಳ್ಯದ ವ್ಯಕ್ತಿ, ಹಂತಹಂತವಾಗಿ ಒಟ್ಟು ₹ 2,90,000 (ಎರಡು ಲಕ್ಷ ತೊಂಬತ್ತು ಸಾವಿರ ರೂಪಾಯಿ) ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ವಂಚನೆಗೊಳಗಾದವರು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp




Post a Comment

0 Comments