ಚಪ್ಪಲಿಯೊಳಗೆ ಅಡಗಿದ್ದ ವಿಷದ ಹಾವು ಕಚ್ಚಿ ಮಹಿಳೆ ಅಸ್ವಸ್ಥ: ಸುಳ್ಯದ ಅಲೆಟ್ಟಿಯಲ್ಲಿ ಘಟನೆ

 

Ad
ಸುಳ್ಯ: ಚಪ್ಪಲಿಯೊಳಗೆ ಸೇರಿಕೊಂಡಿದ್ದ ವಿಷಪೂರಿತ ಹಾವು ಕಚ್ಚಿ ಮಹಿಳೆಯೊಬ್ಬರು ಅಸ್ವಸ್ಥರಾದ ಘಟನೆ ಭಾನುವಾರ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದಲ್ಲಿ ನಡೆದಿದೆ.

ಅಲೆಟ್ಟಿ ಗ್ರಾಮದ ಕೋಲ್ತಾರು ನಿವಾಸಿ ವಿನುತಾ ಎಂಬುವವರು ಭಾನುವಾರ ಬೆಳಿಗ್ಗೆ ಮನೆಯಂಗಳದಲ್ಲಿದ್ದ ತಮ್ಮ ಚಪ್ಪಲಿಯನ್ನು ಧರಿಸಲು ಹೋದಾಗ, ಅದರೊಳಗೆ ಅಡಗಿದ್ದ ಹಾವು ಅವರ ಕಾಲಿಗೆ ಕಚ್ಚಿದೆ.

Ad

Ad


ಹಾವು ಕಚ್ಚಿದ ತಕ್ಷಣವೇ ಮನೆಯವರು ವಿನುತಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ ಕಾರಣ, ವಿನುತಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯ ಸುತ್ತಮುತ್ತ ಚಪ್ಪಲಿ ಅಥವಾ ಬೂಟುಗಳನ್ನು ಧರಿಸುವ ಮೊದಲು ಪರಿಶೀಲಿಸಿಕೊಳ್ಳುವಂತೆ ಸ್ಥಳೀಯರು ಸಲಹೆ ನೀಡಿದ್ದಾರೆ.


Post a Comment

0 Comments