ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿತ್ವವನ್ನು ಕುರಿತು ಲೋಕನೀತಿ ಮತ್ತು ಸಿ.ಎಸ್.ಡಿಎಸ್ ಸಂಸ್ಥೆಗಳು ನಡೆಸಿದ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ. ವರದಿಯು ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿರುವುದನ್ನು ದೃಢಪಡಿಸಿದೆ.
ಶಕ್ತಿ ಯೋಜನೆ: ಅತ್ಯಂತ ಯಶಸ್ವಿ ಯೋಜನೆಯಾಗಿದ್ದು, ಶೇ. 96% ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭ ಪಡೆದಿದ್ದಾರೆ.
ಅನ್ನಭಾಗ್ಯ ಯೋಜನೆ: ಶೇ. 94% ಬಿಪಿಎಲ್ ಕುಟುಂಬಗಳನ್ನು ತಲುಪಿದೆ. ಇದರಿಂದ ಶೇ. 64% ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ವರದಿ ಹೇಳಿದೆ.
ಗೃಹಜ್ಯೋತಿ: ಶೇ. 82% ಮನೆಗಳಿಗೆ ತಲುಪಿದ್ದು, ಶೇ. 74% ಕುಟುಂಬಗಳು ತಿಂಗಳಿಗೆ ₹ 500 ವರೆಗೆ ಉಳಿತಾಯ ಮಾಡುತ್ತಿವೆ.
ಗೃಹಲಕ್ಷ್ಮಿ: ಶೇ. 78% ಮಹಿಳೆಯರು ಪ್ರಯೋಜನ ಪಡೆದಿದ್ದು, ಶೇ. 88% ಮಹಿಳೆಯರು ಮನೆಯ ನಿರ್ಧಾರಗಳಲ್ಲಿ ಭಾಗವಹಿಸುವಷ್ಟು ಆತ್ಮವಿಶ್ವಾಸ ಗಳಿಸಿದ್ದಾರೆ.
ಯುವನಿಧಿ ಯೋಜನೆ: ಇದರ ವ್ಯಾಪ್ತಿ ಅತ್ಯಲ್ಪ (ಕೇವಲ ಶೇ. 7%) ಆಗಿದ್ದರೂ, ಲಾಭ ಪಡೆದವರಲ್ಲಿ ಶೇ. 51% ಮಂದಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಲ್ಲಿ ಸೇರಿಕೊಂಡಿರುವುದು ಗಮನಾರ್ಹ.
ಮಹಿಳಾ ಸಬಲೀಕರಣಕ್ಕೆ ನೈಜ ದಿಕ್ಕು: ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಫಲಾನುಭವಿಗಳಲ್ಲಿ ಶೇ. 70–75% ರಷ್ಟು ಮಹಿಳೆಯರಿದ್ದು, ಈ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ನೈಜ ದಿಕ್ಕನ್ನು ತೋರಿಸುತ್ತಿವೆ ಎಂದು ವರದಿ ಸ್ಪಷ್ಟಪಡಿಸಿದೆ.
ಉತ್ತರ ಕರ್ನಾಟಕ ಮುಂಚೂಣಿ: ಜಿಲ್ಲಾವಾರು ಫಲಾನುಭವಿಗಳ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ಬಹುಪಾಲು ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಮುಂಚೂಣಿಯಲ್ಲಿವೆ. ಆದರೆ, ಕರಾವಳಿ ಭಾಗದಲ್ಲಿ ಜಾಗೃತಿ ಹೆಚ್ಚಿದ್ದರೂ, ನಿಯಮಿತ ಬಳಕೆ ಕಡಿಮೆ ಇದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

.jpg)
0 Comments