ಬಿಹಾರ ವಿಧಾನಸಭೆ ಚುನಾವಣೆ–2025ರಲ್ಲಿ ಜನಪ್ರಿಯ ಜನಪದ ಗಾಯಕಿ ಮತ್ತು BJP ಅಭ್ಯರ್ಥಿ ಮೈಥಿಲಿ ಠಾಕೂರ್ (25) ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅವರು ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಿ RJD ಅಭ್ಯರ್ಥಿ ಬಿನೋದು ಮಿಶ್ರ ಅವರನ್ನು 11,730 ಮತಗಳ ಅಂತರದಲ್ಲಿ ಸೋಲಿಸಿ ವಿಜಯಶ್ರೀ ಘೋಷಿಸಿದರು.
ಮೈಥಿಲಿ ಠಾಕೂರ್ ಈಗ ಬಿಹಾರದ ಅತ್ಯಂತ ಕಿರಿಯ ಶಾಸಕಿ ಎಂಬ ಗೌರವ ಪಡೆದಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಅವರು ವಿವಿಧ ಸಂಗೀತ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದರು. ಸಂಸ್ಕೃತಿ ಮತ್ತು ಜನಪದ ಸಂಗೀತದ ಬಲವಾದ ಪ್ರತಿನಿಧಿಯಾಗಿ ಹೆಸರು ಮಾಡಿರುವ ಅವರು, ಈಗ ಜನಸೇವೆಯ ಮಾರ್ಗದಲ್ಲಿ ಕಾಲಿಟ್ಟಿದ್ದಾರೆ.
ಅಲಿನಗರ ಕ್ಷೇತ್ರದಲ್ಲಿ ಮುಸ್ಲಿಮ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಈ ಬಾರಿ BJPಗೆ ಭಾರಿ ಬೆಂಬಲ ವ್ಯಕ್ತವಾದುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೈಥಿಲಿ ಠಾಕೂರ್ ಅವರು ತಮ್ಮ ಗೆಲುವಿನ ನಂತರ, “ಜನರ ವಿಶ್ವಾಸಕ್ಕೆ ನಾನು ತಕ್ಕ ಪ್ರತಿಫಲ ನೀಡುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಮೈಥಿಲಿ ಠಾಕೂರ್ ಅವರ ಗೆಲುವು ಯುವ ರಾಜಕಾರಣಿಗಳಿಗೆ ಪ್ರೇರಣೆಯಾಗಿದೆ. ಬಿಹಾರ ರಾಜಕೀಯದಲ್ಲಿ ಹೊಸ ಮುಖ, ಹೊಸ ಶಕ್ತಿ, ಹೊಸ ನಿರೀಕ್ಷೆಯೊಂದಿಗೆ ಅವರು ಪದವೀಭಾರ ವಹಿಸಲಿದ್ದಾರೆ.

0 Comments