ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅಡ್ಡಿಪಡಿಸಿದ ಪೊಲೀಸರು; ಸ್ಥಳದಲ್ಲೇ ನಿಂತು ಅಂಕ ನಡೆಸಿಕೊಟ್ಟ ಶಾಸಕ ಅಶೋಕ್ ರೈ!

 

Ad
ವಿಟ್ಲ: 800 ವರ್ಷಗಳ ಇತಿಹಾಸವಿರುವ ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರು ಅಡ್ಡಿಪಡಿಸಿದಾಗ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಕ್ತರ ಪರವಾಗಿ ನಿಂತು ಅಂಕ ನಡೆಸಿಕೊಟ್ಟ ಘಟನೆ ನಡೆದಿದೆ.ಘಟನೆಯ ವಿವರ:

ಕೇಪು ಕ್ಷೇತ್ರದಲ್ಲಿ ಜಾತ್ರೋತ್ಸವದ ಅಂಗವಾಗಿ ಪ್ರತಿವರ್ಷ ಕೋಳಿ ಅಂಕ ನಡೆಯುವುದು ವಾಡಿಕೆ. ಈ ವರ್ಷವೂ ಡಿ. 16ರ ಜಾತ್ರೆಯ ನಂತರ ಇಂದು ಕೋಳಿ ಅಂಕ ಆಯೋಜಿಸಲಾಗಿತ್ತು. ಆದರೆ, ಕಾನೂನುಬಾಹಿರ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಧ್ಯಾಹ್ನ ಅಂಕ ಆರಂಭವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಅಡ್ಡಿಪಡಿಸಿದರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, "ಯಾರೂ ಹೆದರಬೇಡಿ, ನಾನು ನಿಮ್ಮ ಜೊತೆಗಿದ್ದೇನೆ. ಸಂಜೆವರೆಗೆ ಅಂಕ ನಡೆದೇ ತೀರುತ್ತದೆ" ಎಂದು ಭರವಸೆ ನೀಡಿದರು. ಸಂಜೆ 5 ಗಂಟೆಯವರೆಗೆ ತಾವೇ ಕುದ್ದು ಸ್ಥಳದಲ್ಲಿ ನಿಂತು, ಸಾರ್ವಜನಿಕರೊಂದಿಗೆ ಬೆರೆತು ಧಾರ್ಮಿಕ ವಿಧಿವಿಧಾನದಂತೆ ಕೋಳಿ ಅಂಕ ನಡೆಯುವಂತೆ ನೋಡಿಕೊಂಡರು.

ಶಾಸಕರ ಮಾತು:

> "ಇದು ಜೂಜಾಟವಲ್ಲ, ಶತಮಾನಗಳಿಂದ ನಡೆದುಬಂದ ಧಾರ್ಮಿಕ ನಂಬಿಕೆ. ಭಕ್ತರು ಹರಕೆ ರೂಪದಲ್ಲಿ ಕೋಳಿಗಳನ್ನು ತರುತ್ತಾರೆ. ಪೊಲೀಸರಿಗೆ 3 ಗಂಟೆಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರೂ ಅವರು ಜನರನ್ನು ಚದುರಿಸಲು ಯತ್ನಿಸಿದ್ದು ಸರಿಯಲ್ಲ. ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ."

Post a Comment

0 Comments