🥇‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗೆ ಭರತನಾಟ್ಯ ಪ್ರದರ್ಶನ ಮಾಡಲು ಸಜ್ಜಾಗಿರುವ ವಿದುಷಿ ದೀಕ್ಷಾ 🔥

 

Bharathanatya

ಉಡುಪಿ: ಭರತನಾಟ್ಯದ ಲೋಕದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಸಿದ್ಧವಾಗಿದೆ. ಉಡುಪಿಯ ಪ್ರತಿಭಾವಂತ ನಾಟ್ಯ ಕಲಾವಿದೆ ವಿದುಷಿ ದೀಕ್ಷಾ ಅವರು ನಿರಂತರವಾಗಿ 216 ಗಂಟೆಗಳ (9 ದಿನಗಳ) ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಭರತನಾಟ್ಯ ಮ್ಯಾರಥಾನ್ ಕಾರ್ಯಕ್ರಮವು 2025ರ ಆಗಸ್ಟ್ 21ರಿಂದ ಆಗಸ್ಟ್ 30ರವರೆಗೆ ನಡೆಯಲಿದ್ದು, ವೇದಿಕೆ ಡಾ. ಜಿ. ಶಂಕರ್ ಫ್ಯಾಮಿಲಿ ಕಾಲೇಜ್, ಪಿಜೆ ಡಿ ಶಂಕರಗೋಳ ಆಡಿಯಟೋರಿಯಂ, ಉಡುಪಿಯಲ್ಲಿ ಸಜ್ಜಾಗಿದೆ.

ಸಾಂಸ್ಕೃತಿಕ ಲೋಕದ ಅನೇಕ ಗಣ್ಯರು, ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಈ ಅಪೂರ್ವ ಸಾಧನೆಗೆ ಸಾಕ್ಷಿಯಾಗಲು ನಿರೀಕ್ಷಿಸಲಾಗುತ್ತಿದೆ.

“ನವರಸ ದೀಕ್ಷಾ ವೈಭವಂ” ಶೀರ್ಷಿಕೆಯಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡೋಣ.

Post a Comment

0 Comments