🔥ಆರ್‌ಸಿಬಿ ಸ್ಟಾರ್ ಯಶ್ ದಯಾಳ್ ಬಿಕ್ಕಟ್ಟು – ಗಂಭೀರ ಆರೋಪಗಳ ನಡುವೆ ಟೂರ್ನಿಯಿಂದ ಔಟ್!🔥

 

Rcb

ಉತ್ತರ ಪ್ರದೇಶ ಟಿ20 ಲೀಗ್ ಇಂದು (17 ಆಗಸ್ಟ್ 2025) ಆರಂಭವಾಗುತ್ತಿದೆ. ಮೊದಲ ಪಂದ್ಯ ಮೀರತ್ ಮಾವರಿಕ್ಸ್ ಹಾಗೂ ಕಾನ್ಪುರ್ ಸೂಪರ್‌ಸ್ಟಾರ್ಸ್ ನಡುವೆ ನಡೆಯಲಿದೆ. ಆದರೆ, ಟೂರ್ನಿ ಆರಂಭವಾಗುವ ಮುನ್ನವೇ ಆರ್‌ಸಿಬಿ ಸ್ಟಾರ್ ಯಶ್ ದಯಾಳ್ ಅವರಿಗೆ ಭಾರೀ ಆಘಾತವಾಗಿದೆ. ಅವರಿಗೆ ಟೂರ್ನಿಯಲ್ಲಿ ಆಡದಂತೆ ನಿಷೇಧ (Ban) ಹೇರಲಾಗಿದೆ.

ಗೋರಖ್‌ಪುರ ಲಯನ್ಸ್ ತಂಡ ಯಶ್ ಅವರನ್ನು ಹರಾಜಿನಲ್ಲಿ ₹7 ಲಕ್ಷಕ್ಕೆ ಖರೀದಿಸಿತ್ತು. ಕಳೆದ 2 ವರ್ಷಗಳಲ್ಲಿ ಯಶ್ ದಯಾಳ್ ಕ್ರಿಕೆಟ್‌ನಲ್ಲಿ ದೊಡ್ಡ ಬೇಡಿಕೆಯ ಆಟಗಾರರಾಗಿದ್ದರು. ಆದರೆ ಐಪಿಎಲ್ 2025 ಬಳಿಕ ಅವರ ಜೀವನದಲ್ಲಿ ಬಿರುಕು ಬಿದ್ದಿದ್ದು, ಅದಕ್ಕೆ ಕಾರಣ ಕ್ರಿಕೆಟ್ ಅಲ್ಲ – ವೈಯಕ್ತಿಕ ಜೀವನದ ಮೇಲೆ ಕೇಳಿಬಂದಿರುವ ಗಂಭೀರ ಆರೋಪಗಳು.

ವರದಿಗಳ ಪ್ರಕಾರ, ಗಾಜಿಯಾಬಾದ್ ಹಾಗೂ ಜೈಪುರ ಮೂಲದ ಇಬ್ಬರು ಯುವತಿಯರು ಯಶ್ ವಿರುದ್ಧ ಲೈಂಗಿಕ ಕಿರುಕುಳ ಸಂಬಂಧಿತ ದೂರುಗಳನ್ನು ನೀಡಿದ್ದಾರೆ. ಇದರ ಪರಿಣಾಮವಾಗಿ ಟೂರ್ನಿ ಆಯೋಜಕರು ಅವರನ್ನು ಸ್ಪರ್ಧೆಯಿಂದ ದೂರವಿಟ್ಟಿದ್ದಾರೆ.

ಅಧಿಕೃತ ಪ್ರಕಟಣೆ ಇನ್ನೂ ಬಾರದಿದ್ದರೂ, ಯಶ್ ದಯಾಳ್ ಉತ್ತರ ಪ್ರದೇಶ ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಘಟನೆ ಅವರ ಕ್ರಿಕೆಟ್ ವೃತ್ತಿಜೀವನಕ್ಕೂ ಅಪಾಯ ತಂದುಕೊಟ್ಟಿದೆ.

Post a Comment

0 Comments