ಅಡಕೆ ಕ್ಯಾನ್ಸರ್ ಕಾರಕವೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ನೀಡಿರುವ ವರದಿ ಗೊಂದಲಗಳ ನಡುವೆ, ವಿಷಯದ ನಿಜಾಸತ್ಯ ಪತ್ತೆಹಚ್ಚಲು ಶೀಘ್ರ ಸಂಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿಜ್ಞಾನಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ದೆಹಲಿಯ ಕೃಷಿ ಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಪಹ್ಲಾದ್ ಜೋಶಿ, ರಾಜ್ಯ ಸಚಿವ ಎನ್. ಸೋಮನ,ಬ್ರಿಜೇಶ್ ಚೌಟ, ಅಡಕೆ ಬೆಳೆಯುವ ಪ್ರದೇಶಗಳ ಸಂಸದರು ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು
“ಅಡಿಕೆ ಬೆಳೆಗಾರರ ಜೀವಂತ ಸಮಸ್ಯೆಗಳನ್ನು ಕೇಂದ್ರದ ಮುಂದೆ ಪ್ರಾಮಾಣಿಕವಾಗಿ ಮಂಡಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬೆಳೆಗಾರರ ಹಿತವನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಡಬ್ಲ್ಯೂಎಚ್‌ಒ ವರದಿ ಅಡಕೆ ಉತ್ಪಾದನೆ ಬಗ್ಗೆ ಕೆಲವು ಗೊಂದಲಗಳನ್ನು ಸೃಷ್ಟಿಸಿದೆ. ಈ ತಪ್ಪು ಭಾವನೆಯನ್ನು ದೂರ ಮಾಡಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವಿಜ್ಞಾನಿಗಳ ತಂಡ ಅಧ್ಯಯನ ನಡೆಸುತ್ತಿದೆ. ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ” ಎಂದರು.
ಅವರು ಮುಂದುವರಿದು, ವಿಜ್ಞಾನಿಗಳು ಹಾಗೂ ತಜ್ಞರ ತಂಡ ಕರ್ನಾಟಕಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡುವುದಾಗಿ ಹಾಗೂ ಅಡಕೆ ಕೃಷಿ ಅಭಿವೃದ್ಧಿಗೆ ಸಮಗ್ರ ಮಾರ್ಗಸೂಚಿ ರೂಪಿಸಲಾಗುವುದಾಗಿ ತಿಳಿಸಿದರು
ಸಭೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆಗಳು, ಬೆಳೆ ಹಾನಿ, ಬೆಲೆ ವ್ಯತ್ಯಾಸ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಮೇಲೂ ಚರ್ಚೆ ನಡೆಯಿತು.
ಭಾರತವೇ ವಿಶ್ವದಲ್ಲಿ ಅತಿಹೆಚ್ಚು ಅಡಕೆ ಬೆಳೆಯುವ ದೇಶವಾಗಿದ್ದು, ಜಾಗತಿಕ ಉತ್ಪಾದನೆಯಲ್ಲಿ ಶೇ.63ರಷ್ಟು ಪಾಲು ಹೊಂದಿದೆ.
ಒಟ್ಟು 14 ಲಕ್ಷ ಟನ್ ಅಡಕೆ ಉತ್ಪಾದನೆಗೊಳ್ಳುತ್ತಿದ್ದು, ಇದರಲ್ಲಿ ಕರ್ನಾಟಕವೇ ಸಿಂಹಪಾಲು ಹೊಂದಿದೆ.
ರಾಜ್ಯದಲ್ಲೇ 10 ಲಕ್ಷ ಟನ್ ಅಡಕೆ ಉತ್ಪಾದನೆಯಾಗುತ್ತಿದೆ

0 Comments