ಕಾರ್ಡಿಫ್‌ನಲ್ಲಿ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದ ಇಂಗ್ಲೆಂಡ್ ಓಪನರ್ ಫಿಲ್ ಸಾಲ್ಟ್, ಎರಡನೇ ಟಿ20 ಯಲ್ಲಿ ಸಂಪೂರ್ಣ ಬೇರೆಯ ಬ್ಯಾಟ್ಸ್‌ಮನ್ ಆಗಿ ಮಿಂಚಿದರು. ಲ್ಯಾಂಕಶೈರ್ ತವರೂರಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ 60 ಎಸೆತಗಳಲ್ಲಿ 141 ರನ್‌ಗಳ ಬಿರುಗಾಳಿ ಇನ್ನಿಂಗ್ಸ್ ಆಡುವ ಮೂಲಕ ಅವರು ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲೇ ಬರೆದುಕೊಂಡಿದ್ದಾರೆ.
ಇಂಗ್ಲೆಂಡ್‌ರ ಸ್ಟಾರ್ ಓಪನರ್ ಫಿಲ್ ಸಾಲ್ಟ್ ದಕ್ಷಿಣ ಆಫ್ರಿಕಾ ವಿರುದ್ಧದ ಕಾರ್ಡಿಫ್‌ನಲ್ಲಿ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದ ಸಾಲ್ಟ್. ಶುಕ್ರವಾರ ನಡೆದ ಎರಡನೇ T20I ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಅವರು 60 ಬಾಲ್‌ಗಳಲ್ಲಿ 141 ರನ್‌ಗಳ ದೊಡ್ಡ ಸ್ಕೋರ್ ಮಾಡಿ, ಇಂಗ್ಲೆಂಡ್‌ರ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ್ದ ತಮ್ಮದೇ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಮೊದಲು 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟರೌಬಾದಲ್ಲಿ ಸಿಡಿಸಿದ್ದ ತಮ್ಮದೇ 119 ರನ್‌ಗಳ ದಾಖಲೆಯನ್ನು ಅವರು ಮೀರಿಸಿದ್ದಾರೆ
ಈ ಇನ್ನಿಂಗ್ಸ್ ನೆರವಿನಿಂದ ಇಂಗ್ಲೆಂಡ್ 304/2 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಇದು ಟಿ20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ತಂಡದ ಸ್ಕೋರ್ ಆಗಿದ್ದು, ಟೆಸ್ಟ್ ಮಾನ್ಯತೆ ಪಡೆದ ತಂಡದ ವಿರುದ್ಧ ಸಾಧಿಸಲಾದ ಗರಿಷ್ಠ ಮೊತ್ತವಾಗಿದೆ. ಹಿಂದಿನ ಭಾರತ (297/6) ದಾಖಲೆಯನ್ನೂ ಈ ಮೂಲಕ ಇಂಗ್ಲೆಂಡ್ ಮೀರಿ ವಿಶ್ವದಾಖಲೆ ಬರೆದಿದೆ.
ಸಾಲ್ಟ್‌ರ 141 ರನ್‌ಗಳು T20I ಇತಿಹಾಸದಲ್ಲಿ 7ನೇ ಗರಿಷ್ಠ ದಾಖಲೆಯಾಗಿದೆ. ಈ ಮೂಲಕ ನ್ಯೂಜಿಲೆಂಡ್‌ರ ಫಿನ್ ಅಲೆನ್‌ರ 137 ರನ್‌ಗಳ ದಾಖಲೆಯನ್ನ ಬ್ರೇಕ್ ಮಾಡಿದರು. ಆದರೆ ಒಟ್ಟಾರೆ T20I ದಾಖಲೆ ಇನ್ನೂ ಆಸ್ಟ್ರೇಲಿಯಾದ ಆರನ್ ಫಿಂಚ್ ಹೆಸರಿನಲ್ಲಿದೆ. 2018ರಲ್ಲಿ ಜಿಂಬಾಬ್ವೆ ವಿರುದ್ಧ 172 ರನ್ ಸಿಡಿಸಿದ್ದು ವಿಶ್ವದಾಖಲೆ ಬರೆದಿದ್ದರು.
ಇದರೊಂದಿಗೆ, ಫಿಲ್ ಸಾಲ್ಟ್ ತಮ್ಮ ನಾಲ್ಕನೇ ಟಿ20 ಶತಕವನ್ನು ಸಿಡಿಸಿದ್ದಾರೆ. ಯಾವುದೇ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗೂ ಒಂದಕ್ಕಿಂತ ಹೆಚ್ಚು ಶತಕವಿಲ್ಲದೆ ಇರುವ ಸಂದರ್ಭದಲ್ಲಿ, ಸಾಲ್ಟ್ ಮಾತ್ರ ನಾಲ್ಕು ಶತಕ ಹೊಡೆದು ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಕೇವಲ 39 ಎಸೆತಗಳಲ್ಲಿ ಬಂದ ಈ ಶತಕ, ಇಂಗ್ಲೆಂಡ್ ಪರ ಎಲ್ಲ ಫಾರ್ಮ್ಯಾಟ್‌ಗಳಲ್ಲಿ ದಾಖಲಾಗಿರುವ ಅತ್ಯಂತ ವೇಗದ ಶತಕವಾಗಿದೆ.
📢 ಜಾಹೀರಾತಿಗಾಗಿ ಸಂಪರ್ಕಿಸಿ:
👉 ನಮ್ಮ ಸುದ್ದಿ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
📞 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments