ಶ್ರೀರಾಮ್ ಲೈಫ್ ಇನ್ಷುರನ್ಸ್ ಮಂಗಳೂರು-2 ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆ – ನಿವೃತ್ತ ಶಿಕ್ಷಕರಿಗೆ ಸನ್ಮಾನ

ಶಿಕ್ಷಕರ ದಿನಾಚರಣೆ”

 ಶ್ರೀರಾಮ್ ಲೈಫ್ ಇನ್ಷುರನ್ಸ್ ಮಂಗಳೂರು ವತಿಯಿಂದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮವು  ನಡೆಯಿತು.   ಈ ಸಂದರ್ಭದಲ್ಲಿ ಸಮಾಜದ ಬೆಳವಣಿಗೆಗೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ  ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಕುಮಾರಿ ಪ್ರಜ್ಞಾ ರವರು ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಅಶ್ವಿತಾ  ವಂದಿಸಿದರು. ಕಾರ್ಯಕ್ರಮವನ್ನು ಶುಭಅದೇಶ್ ಕಾರ್ಯಕ್ರಮ ನಿರೂಪಿಸಿದರು.


ಬ್ರಾಂಚ್ ಮ್ಯಾನೇಜರ್ ಎಸ್ತಾರ್ ರಕ್ಷಿತಾ ರಿವರು ಕಾರ್ಯಕ್ರಮದ ನೇತೃತ್ವ ವಹಿಸಿ, ಸಂಸ್ಥೆಯ ಚಟುವಟಿಕೆಗಳು ಹಾಗೂ ಶಿಕ್ಷಕರಿಗೆ ನೀಡುವ ಗೌರವದ ಮಹತ್ವವನ್ನು ವಿವರಿಸಿದರು.

ಶಿಕ್ಷಕರ


ಸಂಸ್ಥೆಯ ರೀಜನಲ್ ಮ್ಯಾನೇಜರ್ ವಿಶ್ವಾಸ್ ನಾಯಕ್ ರವರು ಮುಖ್ಯ ಅತಿಥಿಯಾಗಿ ಮಾತನಾಡಿ, “ಶಿಕ್ಷಕರು ಸಮಾಜದ ಬೆಳಕಿನ ದೀಪಗಳು. ಅವರ ನಿಸ್ವಾರ್ಥ ಸೇವೆಯಿಂದಲೇ ಪೀಳಿಗೆಗಳು ಬೆಳೆದು ಬರುತ್ತಿವೆ. ಆದರೆ ಇಂದಿನ ಹಾಗು ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಪಾತ್ರವು ಬದಲಾಗುತ್ತಿದ್ದು, ಹೊಸ ಸವಾಲುಗಳನ್ನು ಎದುರಿಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ರೀಜನಲ್ ಟ್ರೈನರ್ ಮೈರೆನ್ ರೆಬೆಲ್ಲೊ ರಿವರು ಸಂಸ್ಥೆಯ ಕಾರ್ಯನಿರ್ವಹಣೆ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಸುಶಾಂನ್ ರಾಜ್ ಮತ್ತು ನಿಕಿತ್ ರಿವರು ಶಿಕ್ಷಕರನ್ನು ಪರಿಚಯಿಸಿದರು.

ಕಾರ್ಯಕ್ರಮದ ಕೇಂದ್ರಬಿಂದುಗಳಾದ ಸನ್ಮಾನಿತ ಶಿಕ್ಷಕರು ತಮ್ಮ ಆನುಭವಗಳನ್ನು ಹಂಚಿಕೊಂಡರು. ಅವರು ಹಿಂದಿನ ಕಾಲದ ಶಿಕ್ಷಣ ಪದ್ಧತಿ, ಆ ಕಾಲದ ಶಿಸ್ತಿನ ಮೌಲ್ಯಗಳು ಹಾಗೂ ಆವೃತ್ತಿಯಲ್ಲಿದ್ದ ಪಾಠ ಕ್ರಮವನ್ನು ಸ್ಮರಿಸಿದರು. ಇಂದಿನ ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಹಿಂದಿನ ಅವರು ಔಪಚಾರಿಕ ಶಿಕ್ಷಣದ ನಡುವಿನ ವ್ಯತ್ಯಾಸವನ್ನು ವಿವರಿಸಿ, “ಯಾವುದೇ ಕಾಲದಲ್ಲೂ ವಿದ್ಯಾರ್ಥಿಗಳಿಗೆ ಸನ್ಮಾರ್ಗದ ದಾರಿ ತೋರಿಸುವುದೇ ಶಿಕ್ಷಕರ ನಿಜವಾದ ಕರ್ತವ್ಯ” ಎಂದು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.


📍 ಶಾಖೆಯ ವಿಳಾಸ:

Shriram Life Insurance Company, Loutas Building, 2nd Floor, Above Poorvika Showroom, Bunt’s Hostel, Mangalore.


📢 ಜಾಹೀರಾತಿಗಾಗಿ ಸಂಪರ್ಕಿಸಿ:

👉 ನಮ್ಮ ಸುದ್ದಿ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

📞 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp



Post a Comment

0 Comments