ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ಅವರ ನೇತೃತ್ವದಲ್ಲಿ ನಡೆಯಲಿರುವ ಕುಡ್ತಮುಗೇರು ದಸರಾ ಹಬ್ಬದ ಅಂಗವಾಗಿ 3ನೇ ವರ್ಷದ ಶಾರದಾ ಹುಲಿ – ಶ್ರೀದೇವಿ ಟೈಗರ್ಸ್ ಸೆರ್ಕಳ ಆಮಂತ್ರಣ ಪತ್ರಿಕೆಯು ಇಂದು ಬಿಡುಗಡೆಗೊಂಡಿತು.
ದಸರಾ ಹಬ್ಬದ ಅಂಗವಾಗಿ ಆಯೋಜಿಸಲಿರುವ ಈ ಶಾರದಾ ಹುಲಿ ಕಾರ್ಯಕ್ರಮವು ಅಕ್ಟೋಬರ್ 1, 2025 ರಂದು ಸೆರ್ಕಳ ಶ್ರೀ ಮಹಮ್ಮಾಯಿ ಕ್ಷೇತ್ರದ ಸನ್ನಿಧಾನದಲ್ಲಿ ಅದ್ಧೂರಿಯಾಗಿ ಜರುಗಲಿದೆ.
ಆಮಂತ್ರಣ ಪತ್ರಿಕೆಯನ್ನು ಸೆರ್ಕಳ ಮಹಮ್ಮಾಯಿ ಕ್ಷೇತ್ರದ ಅರ್ಚಕರಾದ ಶ್ರೀ ಹೊನ್ನಪ್ಪ ಸೆರ್ಕಳ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಪ್ರಮುಖರಾದ ಶ್ರೀ ಅಕ್ಷಯ್ ರಾಜಪುತ್, ಶರತ್ ಕುಡ್ತಮುಗೇರು, ರಂಜಿತ್ ವಿಟ್ಲ, ನವೀನ್ ಶೆಟ್ಟಿ ಕುಡ್ತಮುಗೇರು, ಆನಂದ ಪಡಾರು, ಸುಂದರ್ ಸೆರ್ಕಳ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


0 Comments