ಸುಬ್ರಹ್ಮಣ್ಯ – ಮಂಜೇಶ್ವರವನ್ನು ಸಂಪರ್ಕಿಸುವ SH-100 ರಾಜ್ಯ ಹೆದ್ದಾರಿ ರಸ್ತೆ ಈಗ ಅತ್ಯಂತ ದುಸ್ಥಿತಿಗೆ ತಲುಪಿದ್ದು, ಜನಜೀವನಕ್ಕೆ ತೊಂದರೆ ಉಂಟುಮಾಡಿದೆ. ರಸ್ತೆ ತುಂಬಾ ಕಡೆ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು, ಮಳೆ ಬಂದಾಗ ಅವುಗಳಲ್ಲಿ ನೀರು ತುಂಬಿ ವಾಹನ ಚಾಲಕರು ಅಪಘಾತಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಮಳೆನೀರು ಸರಿಯಾಗಿ ಹರಿದು ಹೋಗದೆ ರಸ್ತೆಯ ಮೇಲೆ ನಿಂತುಕೊಳ್ಳುತ್ತಿರುವುದರಿಂದ ಹೊಂಡಗಳು ಇನ್ನಷ್ಟು ವಿಸ್ತರಿಸುತ್ತಿವೆ. ಪರಿಣಾಮವಾಗಿ ರಸ್ತೆ ದಿನದಿಂದ ದಿನಕ್ಕೆ ಹಾಳಾಗುತ್ತಿದ್ದು, ಜನರ ಜೀವಕ್ಕೆ ಅಪಾಯ ಉಂಟಾಗಿದೆ.
ಈ ಹೆದ್ದಾರಿಯನ್ನು ಪ್ರತಿದಿನ ಶಾಲೆ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ರೈತರು ಮತ್ತು ವ್ಯಾಪಾರಸ್ಥರು ಸೇರಿ ನೂರಾರು ಜನರು ಬಳಸುತ್ತಿದ್ದಾರೆ. ಸಾರ್ವಜನಿಕ ಬಸ್‌ಗಳಿಂದ ಹಿಡಿದು ಅಂಬುಲೆನ್ಸ್‌ಗಳವರೆಗೂ ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಹೊಂಡಗಳಿಂದ ಕೂಡಿದ ದಾರಿಯಲ್ಲಿ ತುರ್ತು ಸೇವೆಗಳಿಗೆ ತೊಂದರೆ ಉಂಟಾಗಿದೆ. ಸ್ಥಳೀಯರ ಪ್ರಕಾರ, ಅಲ್ಪ ಮಟ್ಟಿನ ವಿಳಂಬವೂ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ತರಬಹುದೆಂಬ ಆತಂಕ ವ್ಯಕ್ತವಾಗಿದೆ.
ರಸ್ತೆಯ ಹೊಂಡಗಳನ್ನು ಗುರುತಿಸಲು ಕೆಲವೆಡೆ ಜನರು ಕೊಂಬೆಗಳನ್ನು ಇಟ್ಟು ಎಚ್ಚರಿಕೆ ನೀಡುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. “ಇದು ತಾತ್ಕಾಲಿಕ ಪರಿಹಾರ ಮಾತ್ರ, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಪ್ರಯಾಣಿಕರು ಹೇಳುತ್ತಿದರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದು, ಹೊಂಡಗಳನ್ನು ತುರ್ತು ಆಧಾರದ ಮೇಲೆ ದುರಸ್ತಿ ಮಾಡಬೇಕೆಂದು, ಜೊತೆಗೆ ಜೊತೆಗೆ ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.


0 Comments