ಗ್ರಾಹಕರಿಗೆ ಸಿಹಿ ಸುದ್ದಿ: ಜಿಎಸ್‌ಟಿ ಕಡಿತದಿಂದ ಬೈಕ್–ಸ್ಕೂಟರ್ ಖರೀದಿಗೆ ಭಾರಿ ದರ ಇಳಿಕೆ

Gst baik rate

 ಭಾರತ ಸರ್ಕಾರ ಇತ್ತೀಚೆಗೆ ದ್ವಿ ಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು 28% ರಿಂದ 18% ಕ್ಕೆ ಇಳಿಸಿರುವುದು ಗ್ರಾಹಕರಿಗೆ ದೊಡ್ಡ ಉಡುಗೊರಿಯಾಗಿದೆ. ಹೊಸ ದರವು 350cc ಒಳಗಿನ ಎಲ್ಲಾ ಬೈಕ್ ಮತ್ತು ಸ್ಕೂಟರ್‌ಗಳಿಗೆ ಅನ್ವಯವಾಗುತ್ತಿದ್ದು, ಪ್ರತಿ ಬ್ರಾಂಡ್ ಕಂಪನಿಗಳು ಬೆಲೆ ಕಡಿತವನ್ನು ಅಧಿಕೃತವಾಗಿ ಘೋಷಿಸಿವೆ.


ಹೋಂಡಾ (Honda):
ಆಕ್ಟಿವಾ, ಡಿಯೋ, ಶೈನ್, SP125 ಮುಂತಾದ ಮಾದರಿಗಳ ಬೆಲೆಯಲ್ಲಿ ₹5,600ರಿಂದ ₹18,800 ವರೆಗೆ ಕಡಿತ ಕಂಡುಬಂದಿದೆ. ವಿಶೇಷವಾಗಿ CB350 ಸರಣಿಯ ಬೈಕ್‌ಗಳಲ್ಲಿ ಗರಿಷ್ಠ ಇಳಿಕೆ ಕಂಡುಬಂದಿದೆ.

ಹೀರೋ ಮೋಟೋಕಾರ್ಪ್ (Hero MotoCorp):
ಸ್ಪ್ಲೆಂಡರ್+, ಪ್ಯಾಷನ್+, Xoom ಸ್ಕೂಟರ್‌ಗಳಲ್ಲಿ ಸರಾಸರಿ ₹5,800ರಿಂದ ₹11,600 ವರೆಗೆ ಕಡಿತವಾಗಿದೆ. ಕರಿಜ್ಮಾ 210 ಹಾಗೂ ಎಕ್ಸ್‌ಪಲ್ಸ್ 210 ಮಾದರಿಗಳಿಗೆ ಕ್ರಮವಾಗಿ ₹15,743 ಹಾಗೂ ₹14,516 ಇಳಿಕೆ ಘೋಷಿಸಲಾಗಿದೆ.

ಯಮಹಾ (Yamaha):
R15 ಮಾದರಿಯಲ್ಲಿ ₹17,581, MT15 ನಲ್ಲಿ ₹14,964, ಎಫ್‌ಝಡ್‌ ಸರಣಿಯಲ್ಲಿ ಸರಾಸರಿ ₹12,000ಕ್ಕಿಂತ ಹೆಚ್ಚು ಕಡಿತವಾಗಿದೆ. ಫ್ಯಾಸಿನೋ, ರೇZರ್ ಸ್ಕೂಟರ್‌ಗಳಿಗೂ ₹7,000–₹9,000 ರಷ್ಟು ಇಳಿಕೆ ಕಂಡುಬಂದಿದೆ.

 ಇತರ ಬ್ರಾಂಡ್‌ಗಳು (TVS, Suzuki, Bajaj):
ಟಿವಿಎಸ್ ಜೂಪಿಟರ್, ಅಪಾಚೆ, ಬಜಾಜ್ ಪಲ್ಸರ್, ಸುಜುಕಿ ಆಕ್ಸೆಸ್ ಸೇರಿದಂತೆ ಜನಪ್ರಿಯ ಮಾದರಿಗಳ ಬೆಲೆಯಲ್ಲಿ ಕೂಡ ₹6,000–₹15,000 ರಷ್ಟು ಇಳಿಕೆ ಆಗಲಿದೆ.

ಆದರೆ, 350cc ಕ್ಕಿಂತ ಹೆಚ್ಚಿನ ಸಾಮರ್ಥ್ಯದ ಲಕ್ಸುರಿ ಬೈಕ್‌ಗಳಿಗೆ ತೆರಿಗೆ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆಯಾಗಲಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಕೆಟಿಎಂ 390, ಹಾರ್ಲೆ ಡೇವಿಡ್‌ಸನ್ ಮುಂತಾದ ಬೈಕ್‌ಗಳಿಗೆ ಗ್ರಾಹಕರು ಹೆಚ್ಚಿನ ಬೆಲೆ ಕಟ್ಟಬೇಕಾಗುತ್ತದೆ.

ಒಟ್ಟಾರೆ, ಸಣ್ಣ ಎಂಜಿನ್ ಸಾಮರ್ಥ್ಯದ ಬೈಕ್ ಹಾಗೂ ಸ್ಕೂಟರ್ ಖರೀದಿಸಲು ಈಗ ಸರಿಯಾದ ಸಮಯ. ಜಿಎಸ್‌ಟಿ ಕಡಿತದಿಂದ ಉಂಟಾಗಿರುವ ಈ ಬೆಲೆ ಇಳಿಕೆ, ಹಬ್ಬದ ಕಾಲದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಉದ್ಯಮ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.


📢 ಜಾಹೀರಾತಿಗಾಗಿ ಸಂಪರ್ಕಿಸಿ:

👉 ನಮ್ಮ ಸುದ್ದಿ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

📞 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments