ದಸರಾ ಪ್ರಯುಕ್ತ ವಿಶೇಷ ರೈಲು: ಬೆಂಗಳೂರು-ಮಂಗಳೂರು ನಡುವೆ ಸಂಚಾರ

 

ರೈಲು
ದಸರಾ ಹಬ್ಬಕ್ಕೆಂದು ಊರಿಗೆ ಬಂದು ಮರಳಿ ಬೆಂಗಳೂರಿಗೆ ಹೋಗುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದೀರಾ!? ಚಿಂತಿಸಬೇಡಿ!

ನೈರುತ್ಯ ರೈಲ್ವೆ ವಲಯ ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರಿನ ಮಂಗಳೂರು ಜಂಕ್ಷನ್ ಹಾಗು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕುಣಿಗಲ್ ಮಾರ್ಗವಾಗಿ ಯಶವಂತಪುರ ಜಂಕ್ಷನ್ ನಡುವೆ ವಿಶೇಷ ರೈಲು ಓಡಿಸುತ್ತಿದೆ!

ಜಾಹೀರಾತು




Ad

ದಿನಾಂಕ 30/10/2025 ಮಂಗಳವಾರ ರೈಲು ಸಂಖ್ಯೆ 06257 ಯಶವಂತಪುರ ಜಂ.-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ ಮಹಾನವಮಿಯ ಶುಭದಿನವಾದ 01/10/2025ರಂದು ಬುಧವಾರ ಬೆಳಗ್ಗೆ 11:15ಕ್ಕೆ ಮಂಗಳೂರಿನ ಮಂಗಳೂರು ಜಂಕ್ಷನ್ ತಲುಪಲಿದೆ.


ಅದೇ ದಿನ ಅಂದರೆ ದಿನಾಂಕ 01/10/2025 ಬುಧವಾರ ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್  ವಿಶೇಷ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2:35ಕ್ಕೆ ಹೊರಟು ರಾತ್ರಿ 11:30ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ. 


ಈ ರೈಲಿಗೆ ಮಂಗಳೂರು ಜಂಕ್ಷನ್ ಹಾಗು ಯಶವಂತಪುರ ಜಂಕ್ಷನ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.


ಈ ರೈಲಿನಲ್ಲಿ 2 ಲಗೇಜ್ ಕಮ್ ಗಾರ್ಡ್ ಕೋಚ್,  4 ಜನರಲ್ ಕೋಚ್,11 ಸ್ಲೀಪರ್ ಕ್ಲಾಸ್, 3 ತೃತೀಯ ದರ್ಜೆಯ ಎಸಿ, 2 ದ್ವಿತೀಯ ದರ್ಜೆಯ ಎಸಿ ಕೋಚುಗಳು ಇರಲಿದೆ.


ಹಬ್ಬದ ಸಮಯದಲ್ಲಿ ಊರಿಗೆ ಬಂದು ಮನೆಯವರ ಜೊತೆಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವವರಿಗೆ ಊರಿಗೆ ಬಂದು ಹಿಂದಿರುಗಲು ಇದು ಒಂದು ಉತ್ತಮ ರೈಲು ಸೇವೆ. 


ಹೀಗಾಗಿ ದಸರಾ ಹಬ್ಬಕ್ಕೆ ಊರಿಗೆ ಬರುವವರು ಈ ರೈಲುಗಳಲ್ಲಿ ಬಂದು ಮರಳಿ ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್-ಯಶವಂತಪುರ ಜಂ. ವಿಶೇಷ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಾಸನ, ಬೆಂಗಳೂರಿಗೆ ಪ್ರಯಾಣ ಬೆಳೆಸಬಹುದು.

ಈಗಾಗಲೇ ರೈಲು ಸಂಖ್ಯೆ 06257 ಯಶವಂತಪುರ ಜಂ.-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌  ರೈಲಿನ ಟಿಕೇಟು ಬುಕ್ಕಿಂಗ್ ಆರಂಭಗೊಂಡಿದೆ.  ಶೀಘ್ರದಲ್ಲಿ ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್-ಯಶವಂತಪುರ ಜಂ. ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಟಿಕೇಟು ಬುಕ್ಕಿಂಗ್ ಕೂಡ ಆರಂಭಗೂಳ್ಳಲಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments