🔥📱 ಮೊಬೈಲ್ ಕಳೆದುಹೋದರೆ ಆತಂಕ ಬೇಡ! – CEIR ಪೋರ್ಟಲ್ ಮೂಲಕ ಸುಲಭ ಟ್ರ್ಯಾಕ್ & ಬ್ಲಾಕ್

Mobile teft

 ಇಂದಿನ ಜೀವನದಲ್ಲಿ ಮೊಬೈಲ್ ಫೋನ್ ಅನಿವಾರ್ಯ ಸಾಧನವಾಗಿದೆ. ಆದರೆ ಕೆಲವೊಮ್ಮೆ ಅದು ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಸರ್ಕಾರದ CEIR (Central Equipment Identity Register) ಪೋರ್ಟಲ್ ಜನರಿಗೆ ನೆರವಾಗುತ್ತಿದೆ. ಈ ಪೋರ್ಟಲ್ ಮೂಲಕ ಫೋನ್‌ನ್ನು ಬ್ಲಾಕ್ ಮಾಡುವುದು, ಟ್ರ್ಯಾಕ್ ಮಾಡುವುದು ಹಾಗೂ ಸಿಕ್ಕ ನಂತರ ಅನ್‌ಬ್ಲಾಕ್ ಮಾಡುವ ವ್ಯವಸ್ಥೆ ಇದೆ.


ಮೊಬೈಲ್ ಕಳೆದುಹೋದ ತಕ್ಷಣ ಮೊದಲು ಸಮೀಪದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸುವುದು ಅತ್ಯಗತ್ಯ. ನಂತರ ಸೇವಾ ಕೇಂದ್ರಕ್ಕೆ ಕರೆ ಮಾಡಿ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿಕೊಳ್ಳಬೇಕು. ಬಳಿಕ https://www.ceir.gov.in/ ವೆಬ್‌ಸೈಟ್‌ಗೆ ತೆರಳಿ “Block Stolen/Lost Mobile” ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ FIR ಪ್ರತಿಯನ್ನು, ಗುರುತಿನ ಚೀಟಿ, ಹಾಗೂ ಫೋನ್‌ನ IMEI ಸಂಖ್ಯೆ ನಮೂದಿಸಬೇಕು. OTP ದೃಢೀಕರಣದ ನಂತರ ನಿಮ್ಮ ಅರ್ಜಿಯ ಸ್ವೀಕೃತಿಗಾಗಿ Request ID ಸಿಗುತ್ತದೆ. ಈ ID ಮೂಲಕ “Check Request Status” ವಿಭಾಗದಲ್ಲಿ ನಿಮ್ಮ ಮೊಬೈಲ್ ಬ್ಲಾಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಬಹುದು.


IMEI ಸಂಖ್ಯೆ ಪ್ರತಿಯೊಂದು ಫೋನ್‌ಗೆ ವಿಶೇಷ ಗುರುತು. ಇದು ಫೋನ್‌ನ್ನು ಪತ್ತೆಹಚ್ಚಲು ಪ್ರಮುಖ ಪಾತ್ರವಹಿಸುತ್ತದೆ. CEIR ವ್ಯವಸ್ಥೆಯಿಂದ ಬ್ಲಾಕ್ ಆದ ಫೋನ್‌ಗಳನ್ನು ಯಾರೂ ಬಳಸಲಾಗದು. ಹೀಗಾಗಿ ಕಳ್ಳರು ಫೋನ್ ಬಳಕೆ ಮಾಡುವುದು ಅಸಾಧ್ಯ.


ಫೋನ್ ಸಿಕ್ಕಿದ ನಂತರ, CEIR ಪೋರ್ಟಲ್‌ನಲ್ಲಿ “Un-Block Found Mobile” ಆಯ್ಕೆ ಮಾಡಿ. ಮೊದಲು ಪಡೆದ Request ID, ಗುರುತಿನ ದಾಖಲೆ ಹಾಗೂ ಅಗತ್ಯ ವಿವರಗಳನ್ನು ಸಲ್ಲಿಸಬೇಕು. ಪರಿಶೀಲನೆ ಬಳಿಕ ಫೋನ್ ಮರುಬಳಕೆಗೆ ಸಿದ್ಧವಾಗುತ್ತದೆ.


ಈ ವ್ಯವಸ್ಥೆಯ ಪ್ರಮುಖ ಲಾಭವೆಂದರೆ, ಫೋನ್ ಕಳೆದುಹೋದರೆ ಆತಂಕ ಪಡುವ ಅವಶ್ಯಕತೆ ಇಲ್ಲ. ಸರಕಾರದ CEIR ಯೋಜನೆ ಫೋನ್‌ನ್ನು ಬ್ಲಾಕ್ ಮಾಡುವುದರಿಂದ ದುರುಪಯೋಗ ತಡೆಯಬಹುದು. ಜೊತೆಗೆ, ಪತ್ತೆಯಾದ ಬಳಿಕ ಅದನ್ನು ಮತ್ತೆ ಸುಲಭವಾಗಿ ಅನ್‌ಬ್ಲಾಕ್ ಮಾಡಬಹುದು.


ಹೀಗಾಗಿ, ಮೊಬೈಲ್ ಕಳೆದುಹೋದಾಗ ಆತಂಕ ಪಡುವ ಅಗತ್ಯವಿಲ್ಲ. ಸರಕಾರದ CEIR ವ್ಯವಸ್ಥೆಯಿಂದಲೇ ಫೋನ್‌ನ್ನು ಪತ್ತೆ ಹಚ್ಚುವುದು, ಬ್ಲಾಕ್ ಮಾಡುವುದು, ಮರುಅನ್‌ಬ್ಲಾಕ್ ಮಾಡಬಹುದು.



Post a Comment

0 Comments