ಬುಜಂಬಿ ಕೆ. ಕೋಟಿ ಎಂಬ ಸಂತ್ರಸ್ತ ಮಹಿಳೆ, ತನ್ನ ಅಣ್ಣಂದಿರಾದ ಮಾಬುಸಾಬ್ ಮತ್ತು ಸಂಶುದ್ದೀನ್ ವಿರುದ್ಧ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಬುಜಂಬಿ ಅವರ ತಾಯಿಯ ಮರಣದ ನಂತರ, ಮಾಸಿಕ ರೂ. 13,500 ಪಿಂಚಣಿ ಹಣವು ಬುಜಂಬಿ ಹೆಸರಿಗೆ ಬರಲು ಪ್ರಾರಂಭಿಸಿತು. ಈ ಹಣದ ಮೇಲೆ ಕಣ್ಣಿಟ್ಟ ಅಣ್ಣಂದಿರಾದ ಮಾಬುಸಾಬ್ ಮತ್ತು ಸಂಶುದ್ದೀನ್, ಬುಜಂಬಿ ಅವರನ್ನು ಮನೆಯೊಳಗೆ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಇದರಿಂದಾಗಿ ಅವರು ಹೊರ ಜಗತ್ತಿನ ಸಂಪರ್ಕದಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾಯಿತು.
"ನನ್ನ ಮೊಬೈಲ್, ಎಟಿಎಂ ಕಾರ್ಡ್ ಮತ್ತು ಚಿನ್ನಾಭರಣವನ್ನೆಲ್ಲ ಕಸಿದುಕೊಂಡು, ನಾಲ್ಕು ತಿಂಗಳಿನಿಂದ ನನಗೆ ನರಕದ ಜೀವನವನ್ನೇ ನೀಡಿದ್ದಾರೆ" ಎಂದು ಕಣ್ಣೀರಿನಿಂದ ಬುಜಂಬಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೇಗೋ ಸಹೋದರರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ ಬುಜಂಬಿ, ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ.
ಪೊಲೀಸರ ನಿಷ್ಕ್ರಿಯತೆ ಬಗ್ಗೆ ಆಕ್ಷೇಪ:
ಈ ಘಟನೆ ಕುರಿತು ಮೊದಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದರೂ ಮತ್ತು ಪೊಲೀಸರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಬುಜಂಬಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ನನ್ನನ್ನು ಬದುಕಲು ಬಿಡಿ ಎಂದು ಎಷ್ಟೇ ಬೇಡಿಕೊಂಡರೂ ಯಾರೂ ಕಿವಿಗೊಡಲಿಲ್ಲ" ಎಂದು ಅವರು ದೂರಿನಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ಬುಜಂಬಿ ಅವರಿಗೆ ತ್ವರಿತ ನ್ಯಾಯ ಒದಗಿಸಲು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ. ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

.jpg)
0 Comments