ಇತಿಹಾಸ ಪ್ರಸಿದ್ದ ಎಣ್ಮೂರು ಶ್ರೀ ಆದೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದೀ ಬೈದರುಗಳ ಗರಡಿಯಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಲಿಯೇಂದ್ರ ಪೂಜೆ, ತಂಬಿಲ ಸೇವೆ, ದರ್ಶನ ಸೇವೆ, ಹರಿಕೆ ತಂಬಿಲ ಸೇವೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗರಡಿ ಅನುವಂಶಿಕ ಆಡಳಿತ ಅಧಿಕಾರಿ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮ ಆರ್ ಶೆಟ್ಟಿ, ಪಂಜಿಮೊಗರು ಗುತ್ತು ರಘುನಾಥ ರೈ, ಅಲೆಂಗಾರ ಗುತ್ತು ರಘು ನಾಥ ರೈ, ನ್ಯಾಯವಾದಿ ರಾಧಾಕೃಷ್ಣ ರಾಯ ಕಟ್ಟಬೀಡು, ಗರಡಿ ಮಾಹಿತಿದಾರ ಮತ್ತು ಕೇರ್ಪಡ ಶ್ರೀ ಮಹಿಷ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಎನ್ ಜಿ ಲೋಕನಾಥ ರೈ ಪಟ್ಟೆ, ಕಟ್ಟಬೀಡು ಕುಟುಂಬಸ್ಥರು, ಬಾಕಿಲ ಗುತ್ತು ಬೈದರುಗಳ ಗರಡಿಯ ದರ್ಶನ ಪಾತ್ರಗಳಾದ ಶೈಲೇಶ್ ಅಗತಾಡಿ, ಲೋಹಿತ್ ಬಾಕಿಲ ಗುತ್ತು ಹಾಗೂ ಸ್ಥಳೀಯ ಮತ್ತು ಪರವಾಗಿರುವ ಅನೇಕ ಭಕ್ತ ಜನರು ಉಪಸ್ಥಿತರಿದ್ದರು. ಭಕ್ತರು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾದರು.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments