ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಗಣತಿ ಮುಂದುವರೆದಿದ್ದು, ಈವರೆಗೆ 131,65,809 ಮನೆಗಳ 4,87,21,722 ಜನರ ಮಾಹಿತಿ ದಾಖಲಾಗಿದೆ. ಒಟ್ಟಾರೆ ಶೇ. 88.88 ರಷ್ಟು ಗಣತಿ ಪೂರ್ಣಗೊಂಡಿದೆ. ಒಟ್ಟಾರೆ 1,47,88,831 ಮನೆಗಳ ಸಮೀಕ್ಷೆ ಗುರಿ ಹೊಂದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಶೇ.95ಕ್ಕಿಂತ ಹೆಚ್ಚು ಸಮೀಕ್ಷೆ ಪೂರ್ಣಗೊಂಡಿದೆ.
ಭಾನು ವಾರ 1,85,232 ಮನೆಗಳ ಸಮೀಕ್ಷೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಅ.4ರಿಂದ ಸಮೀಕ್ಷೆ ಆರಂಭವಾಗಿದ್ದು, ಈವರೆಗೆ ಶೇ.26.61ರಷ್ಟು ಗಣತಿ ಪೂರ್ಣವಾಗಿದೆ. ಒಟ್ಟು 39,82,335 ಮನೆಗಳ ಪೈಕಿ ಭಾನುವಾರದವರೆಗೆ 11,93,809 ಮನೆಗಳ ಸಮೀಕ್ಷೆ ಪೂರ್ಣವಾಗಿದೆ. ಒಟ್ಟು 37,46,041 ಜನರ ಮಾಹಿತಿ ದಾಖಲು ಮಾಡಲಾಗಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

.jpg)
0 Comments