ವಿಟ್ಲದ ಶ್ರೀಲಕ್ಷ್ಮಿಗೆ ಐದು ಚಿನ್ನದ ಪದಕಗಳ ಗರಿ!

 

Ad
ಮೊದಲ ಭಾರತೀಯ ಒಲಂಪಿಕ್ ಈಜುಪಟು ದಿವಂಗತ ಶ್ರೀ ಮಹಬೂಬ್ ಶಂಶೇರ್ ಖಾನ್ ಅವರ ಸವಿ ನೆನಪಿನ ಪ್ರಯುಕ್ತವಾಗಿ, ಮಾಸ್ಟರ್ ಅಕ್ವಾಟಿಕ್ ಫೆಡರೇಶನ್ ಆಫ್ ಇಂಡಿಯಾದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ "ನ್ಯಾಷನಲ್ ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್‌ಶಿಪ್ 2025" ರಲ್ಲಿ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ ಐದು ಬಂಗಾರದ ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Ad

ಅಕ್ಟೋಬರ್ 11, 2025 ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ನಡೆದ ಈ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರೀಲಕ್ಷ್ಮಿ, ತಾವು ಸ್ಪರ್ಧಿಸಿದ ಐದು ವಿಭಾಗಗಳಲ್ಲೂ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿರುವುದು ಗಮನಾರ್ಹ ಸಾಧನೆಯಾಗಿದೆ.

ಅವರು ಗೆದ್ದ ಪದಕಗಳ ವಿವರ ಹೀಗಿದೆ:

 * 200 ಮೀ. ಫ್ರೀ ಸ್ಟೈಲ್ - ಸ್ವರ್ಣ ಪದಕ

 * 100 ಮೀ. ಮಿಡ್ಲಿ ರಿಲೇ (ವೈಯಕ್ತಿಕ) - ಸ್ವರ್ಣ ಪದಕ

 * 50 ಮೀ. ಬಟರ್‌ಫ್ಲೈ - ಸ್ವರ್ಣ ಪದಕ

 * 50 ಮೀ. ಬ್ರೆಸ್ಟ್ ಸ್ಟ್ರೋಕ್ - ಸ್ವರ್ಣ ಪದಕ

 * ಕರ್ನಾಟಕ ತಂಡದ ಮಿಡ್ಲಿ ರಿಲೇ - ಸ್ವರ್ಣ ಪದಕ

ವಿಟ್ಲದ ಕೋಟಿಕೆರೆ ಮೂಲದ ಗೋಪಾಲ ಸಪಲ್ಯ ಮತ್ತು ಲೀಲಾವತಿ ದಂಪತಿಯ ಕಿರಿಯ ಪುತ್ರಿಯಾಗಿರುವ ಶ್ರೀಲಕ್ಷ್ಮಿ ವಿಟ್ಲ, ಈಜನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಅತ್ಯುತ್ತಮ ಈಜು ತರಬೇತುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿನ ಅವರ ಶ್ಲಾಘನೀಯ ಪ್ರದರ್ಶನದಿಂದಾಗಿ, ಅವರ ಜನ್ಮಸ್ಥಳವಾದ ಕೋಟಿಕೆರೆ, ವಿಟ್ಲವು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.

ಅವರ ಈ ಸಾಧನೆಯು ದೇಶವನ್ನು ಪ್ರತಿನಿಧಿಸುವಂತಹ ಮಹತ್ತರ ಹೆಗ್ಗಳಿಕೆಯನ್ನು ಮುಂದೆ ತಂದುಕೊಡಲಿ ಎಂದು ನಾಡಿನ ಜನತೆ ಹಾರೈಸಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments