ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘನೆ ಮಾಡಿ ಅನಧಿಕೃತ ಕಾರ್ಯನಿರ್ವಹಿಸಿದ ಆರೋಪದಲ್ಲಿ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 12 ನಡೆಯುತ್ತಿರುವ ಬಿಡದಿಯ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದಾರೆ.
ರಾಮಗರ ಜಿಲ್ಲಾ ವ್ಯಾಪ್ತಿಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಬಿಡುತ್ತಿದೆ. ಇದು ನಿಯಮ ಉಲ್ಲಂಘನೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ನೋಟಿಸ್ ಜಾರಿ ಮಾಡಿತ್ತು. ಈ ಬೆನ್ನಲ್ಲೆ ಮಂಗಳವಾರ ಸಂಜೆ ರಾಮನಗರ ಜಿಲ್ಲಾಡಳಿತದಿಂದ ಸ್ಪೂಡಿಯೋ ಮೇಲೆ ದಾಳಿ ನಡೆಸಿ ಸೀಜ್ ಮಾಡಲಾಗಿದೆ.
ಸ್ಟಡಿಯೋಗೆ ಒಟ್ಟು ನಾಲ್ಕು ಗೇಟ್‌ಗಳಿದ್ದು, ಮೂರು ಗೇಟ್‌ಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಒಂದು ಗೇಟ್ ಅನ್ನು ಸ್ಪರ್ಧಿಗಳು ಹೊರ ಹೋಗಲು ಬಿಟ್ಟು ಸಂಜೆ 7 ಗಂಟೆಯವರೆಗೂ ಕಾಲಾವಕಾಶ ನೀಡಿತ್ತು. ಆ ಬಳಿಕ ಸ್ಟುಡಿಯೋ ಒಳಗೆ ಇರುವ ಬಿಗ್ ಬಾಸ್ ಮನೆಗೆ ಅಧಿಕಾರಿಗಳು ಪ್ರವೇಶಿಸಲು ಯತ್ನಿಸಿದಾಗ ವಾಹಿನಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ತಡೆಯಲು ಮುಂದಾಗಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿ ಪೊಲೀಸರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ಎಲ್ಲಾ ಸ್ಪರ್ಧಿಗಳನ್ನು ವಾಹಿನಿ ಹೊರಗೆ ಕಳುಹಿಸಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments