ಕೋಟ್ಯಂತರ ರೂಪಾಯಿಗಳ ವಿಮಾ ಹಣವನ್ನು ಲಪಟಾಯಿಸಲು ತನ್ನ ಸ್ವಂತ ತಂದೆ, ತಾಯಿ ಮತ್ತು ಪತ್ನಿಯನ್ನು ಕೊಂದ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ವಿಶಾಲ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಆತ ಅವರ ಸಾವನ್ನು ರಸ್ತೆ ಅಪಘಾತಗಳೆಂದು ಬಿಂಬಿಸಿ ವಿಮಾ ಕಂಪನಿಗಳಿಗೆ ವಂಚನೆ ಎಸಗಲು ಪ್ರಯತ್ನಿಸಿದ್ದ.
ನಿವಾ ಬೂಪಾ ವಿಮಾ ಕಂಪನಿಯ ಪ್ರತಿನಿಧಿಯೊಬ್ಬರು ನೀಡಿದ ದೂರಿನ ಮೇರೆಗೆ ಹಾಪುರ್ ಪೊಲೀಸ್ ಠಾಣೆಯಲ್ಲಿ ವಿಶಾಲ್ ಕುಮಾರ್ ಮತ್ತು ಆತನ ಸಹಚರ ಸತೀಶ್ ಕುಮಾರ್ ವಿರುದ್ಧ ಕೊಲೆ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ವಿಶಾಲ್ ಕುಮಾರ್ ತನ್ನ ತಂದೆ ಮುಖೇಶ್ ಸಿಂಘಾಲ್, ತಾಯಿ ಪ್ರಭಾ ದೇವಿ ಮತ್ತು ಪತ್ನಿ ಬಲಿ ಸಂಯೋಜನಾ ಹೆಸರಿನಲ್ಲಿ ಅನೇಕ ವಿಮಾ ಕಂಪನಿಗಳಿಂದ ಪಾಲಿಸಿಗಳನ್ನು ಖರೀದಿಸಿದ್ದ. ಆತನ ವಾರ್ಷಿಕ ಆದಾಯ ಕೇವಲ 12-15 ಲಕ್ಷ ರೂಪಾಯಿಗಳಾಗಿದ್ದರೂ, ಖರೀದಿಸಿದ ಪಾಲಿಸಿಗಳ ಒಟ್ಟು ಮೊತ್ತ ಸುಮಾರು 39 ಕೋಟಿ ರೂಪಾಯಿಗಳಷ್ಟಿತ್ತು. ಎಲ್ಲಾ ಪಾಲಿಸಿಗಳಿಗೂ ಕುಮಾರ್ ನಾಮಿನಿಯಾಗಿದ್ದನು.
2017ರಲ್ಲಿ, ಕುಮಾರ್ ತನ್ನ ತಾಯಿ ಪ್ರಭಾ ದೇವಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ತೋರಿಸಿ 80 ಲಕ್ಷ ರೂಪಾಯಿ ವಿಮಾ ಹಣವನ್ನು ಪಡೆದಿದ್ದ. ನಂತರ, ಪತ್ನಿಯ ಸಾವಿನ ಬಳಿಕ 30 ಲಕ್ಷ ರೂಪಾಯಿ ಪಡೆದಿದ್ದ. 2024ರಲ್ಲಿ, ತನ್ನ ತಂದೆಯ ಸಾವನ್ನೂ ಕೂಡ ಅಪಘಾತವೆಂದು ದಾಖಲಿಸಿ ವಿಮಾ ಹಣ ಪಡೆಯಲು ಯತ್ನಿಸಿದ್ದ.
ಈವರೆಗೆ, ಕುಮಾರ್ ವಿವಿಧ ವಿಮಾ ಸಂಸ್ಥೆಗಳಿಂದ ಸುಮಾರು 1 ಕೋಟಿ ರೂಪಾಯಿ ಪಡೆದಿರುವುದು ಬಹಿರಂಗವಾಗಿದೆ.
ವಿಚಾರಣೆಯ ವೇಳೆ, ನಕಲಿ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಗಳನ್ನು ಬಳಸಿ ಈ ಪಾಲಿಸಿಗಳನ್ನು ತೆರೆಯಲಾಗಿದೆ ಎಂಬುದು ದೃಢಪಟ್ಟಿದೆ. ಆರೋಪಿ ವಿಶಾಲ್ ಕುಮಾರ್ ತನಿಖೆಗೆ ಸಹಕರಿಸದೆ ಅಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿರುವುದೂ ಸಹ ಬೆಳಕಿಗೆ ಬಂದಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

.jpg)
0 Comments