ಪುತ್ತೂರು, ಅ.11: ಪಡೂರು ಗ್ರಾಮದ ಸೇಡಿಯಾಪು ಸಮೀಪದ ಕೂಟೇಲು ಪ್ರದೇಶದಲ್ಲಿ ನಡೆದ ಹೆಚ್ಚೇನು ದಾಳಿಯಲ್ಲಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದು, ವಿದ್ಯಾರ್ಥಿ ಹಾಗೂ ರಕ್ಷಣೆಗೆ ಬಂದ ವ್ಯಕ್ತಿ ಗಾಯಗೊಂಡಿದ್ದಾರೆ.
ಅ.10ರಂದು ಸಂಜೆ ಈ ದುರ್ಘಟನೆ ನಡೆದಿದೆ. ಪಡೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಅವರ ಪುತ್ರಿ ಇಶಾ (7) ಹಾಗೂ ಕಿಶೋರ್ ಅವರ ಪುತ್ರ ಪ್ರತ್ಯಶ್ (10) — ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮನೆಗೆ ತೆರಳುತ್ತಿದ್ದ ವೇಳೆ ಹೆಚ್ಚೇನುಗಳು ಏಕಾಏಕಿ ದಾಳಿ ನಡೆಸಿದವು.
ವಿದ್ಯಾರ್ಥಿಗಳು ಸಹಾಯಕ್ಕಾಗಿ ಕಿರುಚಿದಾಗ ಸ್ಥಳೀಯರಾದ ನಾರಾಯಣ್ (40) ರಕ್ಷಣೆಗೆ ಧಾವಿಸಿದರು. ಆದರೆ, ಹೆಚ್ಚೇನುಗಳು ಅವರ ಮೇಲೂ ದಾಳಿ ನಡೆಸಿ ಕಚ್ಚಿದವು. ಗಾಯಗೊಂಡ ಮೂವರನ್ನೂ ತಕ್ಷಣ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು.
ತೀವ್ರ ಗಾಯಗೊಂಡ ಇಶಾ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಾರಾಯಣ್ ಚೇತರಿಕೆ ಹಂತದಲ್ಲಿದ್ದು, ಪ್ರತ್ಯಶ್ ಆರೋಗ್ಯದಲ್ಲೂ ಏರುಪೇರಾಗಿದೆ ಎಂದು ತಿಳಿದು ಬಂದಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments