ಕೆಲಂಬೀರಿ: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ (ರಿ.) ವತಿಯಿಂದ ಆಯೋಜಿಸಲಾಗಿದ್ದ ಪ್ರೋ-ವಾಲಿಬಾಲ್ ಪಂದ್ಯಾಟ ಉದ್ಘಾಟನಾ ಸಮಾರಂಭ ಮತ್ತು ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಅಕ್ಟೋಬರ್ 4 ರಂದು ಯಶಸ್ವಿಯಾಗಿ ನಡೆಯಿತು.
ಶ್ರೀ ಈಶ್ವರಚಂದ್ರ ಭಟ್, ಅರ್ಚಕರು, ಸದಾಶಿವ ದೇವಸ್ಥಾನ ಅಗಳಿ, ಅವರು ದೀಪ ಬೆಳಗುವುದರ ಮೂಲಕ ಅಂಕಣವನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಗಣ್ಯರು ಪಾಲ್ಗೊಂಡು ಯುವ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ (ರಿ.) ಉಪಾಧ್ಯಕ್ಷರಾದ ಶ್ರೀ ಹರೀಶ್ ಬರೆಪ್ಪಾಡಿ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರು, ಪದವಿ ಪೂರ್ವ ಕಾಲೇಜು ಕಾಣಿಯೂರು, ಶ್ರೀ ಕೃಷ್ಣ ಭಟ್ ಎನ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವಕರು ಸಂಘಟಿತರಾಗಿ ಸಮಾಜಮುಖಿ ಕೆಲಸ ಮಾಡುವ ಮಹತ್ವದ ಕುರಿತು ಮಾತನಾಡಿದರು.
ಗ್ರಾಮ ಪಂಚಾಯತ್, ಬೆಳಂದೂರು ಅಧ್ಯಕ್ಷರಾದ ಶ್ರೀಮತಿ ತೇಜಾಕ್ಷಿ ಕೊಡಂಗೆ, ಜೋಕಾಲಿ ಬಳಗ ಕೃಷ್ಣಾಪುರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮುಂಡಾಲ, ಗ್ರಾಮ ಪಂಚಾಯತ್, ಬೆಳಂದೂರು ಸದಸ್ಯರಾದ ಶ್ರೀ ಲೋಹಿತಾಕ್ಷ ಕೆಡೆಂಜಿಕಟ್ಟಿ, ನಿವೃತ್ತ ಮುಖ್ಯ ಗುರುಗಳು ಶ್ರೀ ಕುಶಾಲಪ್ಪ ಗೌಡ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳಾದ ಶ್ರೀ ರಮೇಶ್ ಕಾರ್ಲಾಡಿ, ಶ್ರೀ ಬ್ರಹ್ಮ ಬೈದೆರುಗಳ ಗರಡಿ ಮೊಕ್ತೇಸರರು ಶ್ರೀ ಬಾಬು ಪೂಜಾರಿ ಕೆಲಂಬೀರಿ, ಕಡಬ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾದ ಶ್ರೀ ರಾಕೇಶ್ ರೈ ಕಡೆಂಜಿ, ವೀರಾಂಜನೇಯ ಗೆಳೆಯರ ಬಳಗ ಪಲ್ಲತ್ತಾರು (ರಿ.) ಅಧ್ಯಕ್ಷರಾದ ಶ್ರೀ ಆನಂದ ಕೂಂಕ್ಯ ಹಾಗೂ ಸರಕಾರಿ ಪ್ರೌಢ ಶಾಲೆ, ಸರ್ವೆ ಶಿಕ್ಷಕರು ಶ್ರೀ ಜಾರ್ಜ್ ಕೆ. ವಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಈ ವೇಳೆ ನಡೆದ ಕ್ರೀಡಾಕೂಟದ ಫೈನಲ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ ತಂಡವು ಚಾಂಪಿಯನ್ (Winner) ಪಟ್ಟ ಗಳಿಸಿತು. ವೀರ ಸಾವರ್ಕರ್ ಬಂದರು ತಂಡವು ದ್ವಿತೀಯ (Runners) ಸ್ಥಾನ ಪಡೆಯಿತು. ಅತಿಥಿಗಳು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಅಕ್ಷಯ್ ವಿಷ್ಣು ಬರೆಪ್ಪಾಡಿ ಅವರು ಸ್ವಾಗತ ಮಾಡಿದರು. ಸಂದೇಶ್ ಸೌತೆಮಾರು ಅವರು ಧನ್ಯವಾದ ಅರ್ಪಿಸಿದರು. ಸಮಾರಂಭದ ನಿರೂಪಣೆಯನ್ನು ಗಣೇಶ್ ನಡುವಾಲ್ ಅಚ್ಚುಕಟ್ಟಾಗಿ ನಿರ್ವಹಿಸಿದರು. ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ ಸಂಘಟನೆಯ ಎಲ್ಲಾ ಸದಸ್ಯರು ಹಾಗೂ ಊರಿನ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸಂಘದ ಅಧ್ಯಕ್ಷರಾದ ಶ್ರೀ ರತನ್ ರೈ ಕಾರ್ಲಾಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಆದಿನಾಗಬ್ರಹ್ಮ ಮುಗೇರ್ಕಳ ಗರಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಉಮೇಶ್ ಕೆ.ಎನ್. ಕಾರ್ಲಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀ ವಿಜಯ್ ಕುಮಾರ್ ಸೊರಕೆ, ಸ್ಕಂದಶ್ರೀ ಬಾರ್ ಮಾಲಕರಾದ ಶ್ರೀ ಚೆನ್ನಪ್ಪ ಗೌಡ ನೂಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸುಪ್ರೀತ್ ಜೈನ್, ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಜ್ಞಾನೇಶ್ ಭಟ್, ಬ್ರಹ್ಮ ಬೈದೆರುಗಳ ಗರಡಿ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ ಪೂಜಾರಿ, ದೈವಾನುಗ್ರಹ ಮೆಡಿಕಲ್ ಮಾಲಕಿ ಶ್ರೀ ತೇಜಸ್ವಿನಿ ಕಟ್ಟಪುಣಿ ಮತ್ತು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಹರೀಶ್ ಕಟೀಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಸಚಿನ್ ಸೌತೆಮಾರು ಅವರು ಎಲ್ಲರನ್ನೂ ಸ್ವಾಗತಿಸಿದರೆ, ಗಣೇಶ್ ನಡುವಾಲ್ ಅವರು ಸಮಾರಂಭದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp



0 Comments