ಬೆಳ್ತಂಗಡಿಯ ಯಕ್ಷಿತಾ ರಾಷ್ಟ್ರಮಟ್ಟದ ವಾಲಿಬಾಲ್‌ಗೆ ಆಯ್ಕೆ: ಜಿಲ್ಲೆಗೆ ಕೀರ್ತಿ!

 

Ad
ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಯಕ್ಷಿತಾ ಜೆ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕು ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಇತ್ತೀಚೆಗೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ 17 ವರ್ಷ ವಯೋಮಾನದ ವಿದ್ಯಾರ್ಥಿನಿಯರ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಯಕ್ಷಿತಾ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ಯಕ್ಷಿತಾ ತನ್ನ ಅದ್ಭುತ ಆಟದ ಪ್ರದರ್ಶನದಿಂದ ತಂಡವು ಚಿನ್ನದ ಪದಕ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.

ಈ ಸಾಧನೆಯ ಹಿನ್ನೆಲೆಯಲ್ಲಿ, ಯಕ್ಷಿತಾ ಜೆ ಇದೇ ನವೆಂಬರ್ 7 ರಿಂದ 12ರವರೆಗೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ 70ನೇ ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

Ad

ಯಕ್ಷಿತಾ ಅವರು ಬಂದಾರಿನ ಜನಾರ್ಧನ ಮತ್ತು ಶೀಲಾವತಿ ದಂಪತಿಗಳ ಸುಪುತ್ರಿ. ಅವರು ಬಂದಾರಿನಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಮುಂಡಾಜೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್ ಮತ್ತು ಸಂದೀಪ್ ಶೆಟ್ಟಿ ಅವರು ಯಕ್ಷಿತಾಗೆ ತರಬೇತಿ ನೀಡಿದ್ದಾರೆ.

ಯಕ್ಷಿತಾಳ ಈ ಮಹತ್ವದ ಸಾಧನೆಗೆ ಮುಂಡಾಜೆ ಪ್ರೌಢಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp



Post a Comment

0 Comments