ಬೆಂಗಳೂರು: ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಎಂ. ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ (Hit and Run) ಪ್ರಕರಣದಲ್ಲಿ, ಕಿರಣ್ ಎಂಬುವವರು ತಮ್ಮ ಸಂಬಂಧಿಗಳಾದ ಅನುಷಾ ಮತ್ತು ಅನಿತಾ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಪ್ಪು ಬಣ್ಣದ ಕಿಯಾ ಕಾರು ಡಿಕ್ಕಿ ಹೊಡೆದಿದೆ.
ಈ ಘಟನೆಯಿಂದ ಬೈಕ್‌ನಲ್ಲಿದ್ದ ಅನಿತಾ ಅವರ ಮಂಡಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಶಸ್ತ್ರಚಿಕಿತ್ಸೆ (ಆಪರೇಷನ್) ನಡೆದು ಚಿಕಿತ್ಸೆ ಮುಂದುವರಿದಿದೆ.
ಕಾರು ಚಾಲಕಿ ದಿವ್ಯಾ ಸುರೇಶ್ ಅವರು ಸ್ಥಳದಲ್ಲಿ ನಿಲ್ಲದೇ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾರೆ ಎಂದು ಕಿರಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರಿನ ಸಂಖ್ಯೆಯನ್ನು ಗುರುತಿಸಿ, ಅದು ದಿವ್ಯಾ ಸುರೇಶ್ ಅವರಿಗೆ ಸೇರಿದ್ದು ಎಂದು ದೃಢಪಡಿಸಿದ್ದಾರೆ. ಬಳಿಕ ಅವರನ್ನು ವಿಚಾರಣೆ ನಡೆಸಿ ಕಾರನ್ನು ಸೀಜ್ ಮಾಡಿ, ಕಾನೂನು ಪ್ರಕ್ರಿಯೆಗಳ ನಂತರ ಬಿಡುಗಡೆ ಮಾಡಲಾಗಿದೆ.
* ದೂರುದಾರರ ಅಳಲು: "ಬೈಕ್‌ಗೆ ಗುದ್ದಿದ ಲೇಡಿ ಕಾರು ನಿಲ್ಲಿಸದೇ ಹಾಗೆ ಹೋದರು. ಘಟನೆಯಾದ ಮೂರು ದಿನಗಳ ನಂತರ ದೂರು ನೀಡಿದ್ದೆವು. ಪೊಲೀಸರು ಆರೋಪಿ ದಿವ್ಯಾ ಸುರೇಶ್ ಎಂದು ಪತ್ತೆ ಹಚ್ಚಿದರೂ, ಅವರು ಇನ್ನೂ ಸ್ಟೇಷನ್‌ಗೆ ಬಂದಿಲ್ಲ," ಎಂದು ದೂರುದಾರ ಕಿರಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


0 Comments