ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಊಟದ ತ್ಯಾಜ್ಯ ಎಸೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಬೆಳ್ತಂಗಡಿ ತಾಲೂಕಿನ ಆ ಶಿಕ್ಷಣ ಸಂಸ್ಥೆಯು ತಕ್ಷಣವೇ ತಪ್ಪನ್ನು ಸರಿಪಡಿಸಿದೆ.
ಡಿಸೆಂಬರ್ 12 ರಂದು ಪ್ರವಾಸದಲ್ಲಿದ್ದ ವಿದ್ಯಾರ್ಥಿಗಳು ಊಟ ಮಾಡಿದ ಬಳಿಕ ಕಸವನ್ನು ರಸ್ತೆಗೆ ಸುರಿದಿದ್ದರು. ಇದನ್ನು ಸ್ಥಳೀಯರು ವಿರೋಧಿಸಿದರೂ ಶಿಕ್ಷಕರು ಧಿಕ್ಕರಿಸಿ ಮುಂದೆ ಸಾಗಿದ್ದಾರೆ ಎಂದು ವರದಿಯಾಗಿತ್ತು.
ಈ ಘಟನೆಯ ವಿಡಿಯೋ ವೈರಲ್ ಆಗಿ ಗ್ರಾಮ ಪಂಚಾಯಿತಿಯ ಗಮನಕ್ಕೆ ಬಂದ ತಕ್ಷಣ, ಶಾಲಾ ಆಡಳಿತ ಮಂಡಳಿಯು ಸಂಪಾಜೆ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿದೆ. ಸೋಮವಾರದಂದು ಶಾಲೆಯ ಶಿಕ್ಷಕರು ಖುದ್ದಾಗಿ ಸ್ಥಳಕ್ಕೆ ಬಂದು, ತಾವು ಎಸೆದಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿ ಮಾಡಿ, ನಿಗದಿತ ದಂಡವನ್ನು ಪಾವತಿಸುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

0 Comments