ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್‌ಗಳು ಇಂದಿನಿಂದ ತೆಲಂಗಾಣ ಮಾದರಿಯ ಹೊಸ 'ಪಿ-ಕ್ಯಾಪ್' (P-Cap) ಧರಿಸಲಿದ್ದಾರೆ. ಈ ಮೂಲಕ ಸುಮಾರು ದಶಕಗಳಿಂದಲೂ ರಾಜ್ಯದ ಪೊಲೀಸರು ಬಳಸುತ್ತಿದ್ದ 'ಗ್ಲೋಚ್ ಕ್ಯಾಪ್'ಗೆ ಪೊಲೀಸ್ ಇಲಾಖೆ ಅಂತಿಮ ವಿದಾಯ ಹೇಳಿದೆ.
ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಈ ಹೊಸ ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಸಮಾರಂಭದಲ್ಲಿ ಭಾಗವಹಿಸಿ, ಸಿಬ್ಬಂದಿಗೆ ಹೊಸ ಕ್ಯಾಪ್‌ಗಳನ್ನು ವಿತರಿಸಿದರು.
ಹೊಸ ಪಿ-ಕ್ಯಾಪ್ ಅನ್ನು ತೆಲಂಗಾಣ ರಾಜ್ಯದ ಪೊಲೀಸ್ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಆದರೆ, ಕ್ಯಾಪ್‌ನ ಮಧ್ಯ ಭಾಗದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಲಾಂಛನವನ್ನು ಅಳವಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕಾನ್‌ಸ್ಟೇಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೇಬಲ್‌ಗಳಿಗೆ ಈ ಹೊಸ ಪಿ-ಕ್ಯಾಪ್ ಕಡ್ಡಾಯವಾಗಿದೆ.
ಮೇಲಧಿಕಾರಿಗಳಿಗೆ ವಿನಾಯಿತಿ:
ಆದರೆ, ಎಎಸ್‌ಐ (ASI), ಪಿಎಸ್‌ಐ (PSI), ಸರ್ಕಲ್ ಇನ್ಸ್‌ಪೆಕ್ಟರ್ (Circle Inspector) ಸೇರಿದಂತೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಈ ಹಿಂದಿನಂತೆಯೇ ಖಾಕಿ ಬಣ್ಣದ ಸಾಂಪ್ರದಾಯಿಕ ಕ್ಯಾಪ್ ಅನ್ನು ಧರಿಸುವುದನ್ನು ಮುಂದುವರಿಸಲಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments