ಎಣ್ಮೂರು ಗ್ರಾಮ ಒನ್‌ನಲ್ಲಿ ಎರಡು ದಿನಗಳ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

 

ಜಾಹೀರಾತು

ಕೋಟಿ ಚೆನ್ನಯ ಫ್ರೆಂಡ್ಸ್ ಕ್ಲಬ್ (ರಿ.), ಎಣ್ಮೂರು ಮತ್ತು ಗ್ರಾಮ ಒನ್ ನಿಂತಿಕಲ್ಲು ಇವರು ಅಂಚೆ ಇಲಾಖೆ, ಪುತ್ತೂರು ಭಾರತೀಯ ವಿಭಾಗದ ಸಹಯೋಗದಲ್ಲಿ ಸ್ಥಳೀಯರಿಗಾಗಿ ಆಧಾರ್ ನೋಂದಣಿ ಹಾಗೂ ನಾಗರಿಕ ಶಿಬಿರವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗಿದೆ.


ಎರಡು ದಿನಗಳ ಈ ಶಿಬಿರವು ಅಕ್ಟೋಬರ್ 17, 2025ನೇ ಶುಕ್ರವಾರ ಮತ್ತು ಅಕ್ಟೋಬರ್ 18, 2025 ನೇ ಶನಿವಾರದಂದು ನಂತರ.

ಜಾಹೀರಾತು

ಶಿಬಿರದಲ್ಲಿ ಆಧಾರ್ ಕಾರ್ಡ್‌ಗೆ ಹೊಸದಾಗಿ ನೋಂದಣಿ ಮಾಡಿಸುವುದು, ವಿಳಾಸ, ಹೆಸರು, ಜನ್ಮ ದಿನಾಂಕ ಮುಂತಾದವುಗಳನ್ನು ತಿದ್ದುಪಡಿ ಮಾಡುವುದು ಹಾಗೂ ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ಆಧಾರ್ ಸಂಬಂಧಿ ಸೇವೆಗಳನ್ನು ಪಡೆಯಬಹುದು.

ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.

ಶಿಬಿರದ ವಿವರಗಳು:

 * ದಿನಾಂಕ: 17-10-2025 (ಶುಕ್ರವಾರ) ಮತ್ತು 18-10-2025 (ಶನಿವಾರ)

 * ಸಮಯ: ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ

 * ಸ್ಥಳ: ಗ್ರಾಮ ಒನ್ ನಿಂತಿಕಲ್ಲು (ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವಾಣಿಜ್ಯ ಸಂಕೀಣದಲ್ಲಿ)


 ನಾಳೆ ಮೊದಲು ಬಂದ 40 ಜನರಿಗೆ ಮಾತ್ರ ಅವಕಾಶ.


ಅವಕಾಶವನ್ನು ಸದುಪಯೋಗಗೋಳಿಸಿಕೊಳ್ಳಿ 🙏🏻

ಜಾಹೀರಾತುಗಾಗಿ ಸಂಪರ್ಕಿಸಿ:


ನಮ್ಮ ಸತ್ಯಪಥ ಸುದ್ದಿ ಪ್ಲಸ್ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ನೀವು ಬಯಸುವಿರಾ?

https://sathyapathanewsplus.blogspot.com

ಜಾಹೀರಾತುಗಳಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments