ಸತ್ಯಪಥ ನ್ಯೂಸ್ ಪ್ಲಸ್ ವತಿಯಿಂದ ಆಯೋಜಿಸಲಾದ “ಮುದ್ದು ಕೃಷ್ಣ” ಫ್ಯಾನ್ಸಿ ಡ್ರೆಸ್ ಸ್ಪರ್ಧೆ 2025 ಭವ್ಯವಾಗಿ ಸಂಪನ್ನಗೊಂಡಿದೆ. 0 ರಿಂದ 4 ವರ್ಷ ವಯಸ್ಸಿನ ಮುದ್ದು ಮಕ್ಕಳ ಕೃಷ್ಣ ವೇಷಭೂಷಣದ ಮನಮೋಹಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಆಕರ್ಷಣೆ ಮೂಡಿಸಿದವು.
ಸ್ಪರ್ಧೆಯ ಫಲಿತಾಂಶವನ್ನು ಆಗಸ್ಟ್ 30ರಂದು ಅಧಿಕೃತ ಇನ್‌ಸ್ಟಾಗ್ರಾಂ ಪೇಜ್ @sathyapatha news plus ನಲ್ಲಿ ಪ್ರಕಟಿಸಲಾಯಿತು.
ವಿಜೇತರು:
🥇 ಪ್ರಥಮ ಬಹುಮಾನ: ರಿಷಾನ್, ಕುಕ್ಕುಜೆ
🥈 ದ್ವಿತೀಯ ಬಹುಮಾನ: ಹಿಯಾ ಹಶಿನಿ, ಹೊಸಂಗಡಿ
ವಿವಿಧೆಡೆಗಳಿಂದ ಮಕ್ಕಳ ಮನಮೋಹಕ ಕೃಷ್ಣ ವೇಷದ ಚಿತ್ರಗಳು ಸ್ಪರ್ಧೆಗೆ ಬಂದಿದ್ದು, ಇವು ಪ್ರೇಕ್ಷಕರ ಹೃದಯ ಗೆದ್ದವು. ಸ್ಪರ್ಧೆಯ ಮೌಲ್ಯಮಾಪನ Instagram Likes,ಆಧಾರಿತವಾಗಿತ್ತು.
ಎಲ್ಲಾ ಪೋಷಕರಿಗೂ ಮತ್ತು ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮುದ್ದು ಮಕ್ಕಳಿಗೂ ಹೃತ್ಪೂರ್ವಕ ಧನ್ಯವಾದಗಳು.ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆ ನೀಡಿದೆ.

0 Comments