ಮೈಸೂರು: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಮಹಾರಾಜ ಟ್ರೋಫಿ KSCA T20 – 2025 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮಂಗಳೂರು ಡ್ರಾಗನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಮೈಸೂರು ಶ್ರೀಕಾಂತದತ್ತ ನರಸಿಂಹರಾಜ ವಡೆಯರ್ ಮೈದಾನದಲ್ಲಿ ಗುರುವಾರ ನಡೆದ ರೋಚಕ ಅಂತಿಮ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದರೂ, ಮಂಗಳೂರು ತಂಡವು ಹುಬ್ಬಳಿ ಟೈಗರ್ಸ್ ವಿರುದ್ಧ 14 ರನ್‌ಗಳ ಅಂತರದಿಂದ (VJD ವಿಧಾನ) ಜಯ ಸಾಧಿಸಿತು.
ಹುಬ್ಬಳಿ ಟೈಗರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 154 ರನ್ ಗಳಿಸಿದರು. ಪ್ರತಿಯಾಗಿ ಮಂಗಳೂರು ಡ್ರಾಗನ್ಸ್ ತಂಡ 10.4 ಓವರ್‌ಗಳಲ್ಲಿ 77/3 ರನ್ ಗಳಿಸುವ ವೇಳೆಗೆ ಮಳೆ ಆರಂಭವಾಯಿತು. ಪಂದ್ಯವನ್ನು ನಿಲ್ಲಿಸಿ ಬಳಿಕ VJD ವಿಧಾನದಲ್ಲಿ ಲೆಕ್ಕಾಚಾರ ನಡೆಸಿದಾಗ ಮಂಗಳೂರು ಡ್ರಾಗನ್ಸ್ ವಿಜೇತರಾಗಿ ಘೋಷಿಸಲ್ಪಟ್ಟರು.
ಈ ಜಯದೊಂದಿಗೆ ಮಂಗಳೂರು ಡ್ರಾಗನ್ಸ್ ತಂಡವು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾರಾಜ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಟೂರ್ನಮೆಂಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಡ್ರಾಗನ್ಸ್, ಕೊನೆಗೂ ಅಭಿಮಾನಿಗಳ ನಿರೀಕ್ಷೆಗೂ ತಕ್ಕಂತೆ ಕಿರೀಟವನ್ನು ಮುಡಿಗೇರಿಸಿಕೊಂಡಿದರೆ.

0 Comments