🔴ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ಚೌತಿ ತಂಬಿಲ ಸೇವೆ 💠

 

Yenmoor garadi

ಇತಿಹಾಸ ಪ್ರಸಿದ್ಧ  ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯರ ಆದಿ ಬೈದೇರುಗಳ ಗರಡಿಯಲ್ಲಿ  ಪೂರ್ವ ಸಂಪ್ರದಾಯದಂತೆ ಪತ್ತನಾಜೆಯಂದು ಮುಚ್ಚಿದ ಗರ್ಭಗುಡಿಯ ಬಾಗಿಲು  ಚೌತಿಯಂದು ತೆರೆದು ತಂಬಿಲ  ನಡೆಯಿತು.


 ಬೈದೇರುಗಳ  ತಂಬಿಲ ನಡೆದು,ದರುಶನ ನಡೆಯಿತು ಇದೇ ಸಂದರ್ಭದಲ್ಲಿ ಕದಿರು ವಿತರಿಸಲಾಯಿತು.ಕಂಚುಕಲ್ಲಿಗೆ ತೆಂಗಿನ
ಕಾಯಿ ಒಡೆದು ಪ್ರಾಥಿಸಲಾಯಿತು,ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ಗರ್ಭಗುಡಿಯಲಿ ತಂಬಿಲ ನಡೆಯಿತು.



ಅನುವಂಶಿಕ ಆಡಳಿತದಾರ ಕಟ್ಟ ಬೀಡು ರಾಮಕೃಷ್ಣ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಗಂಧ ಪ್ರಸಾದ ನೀಡಲಾಯಿತು,ನಂತರ ಅನ್ನಸಂತರ್ಪಣೆ ನಡೆಯಿತು.



ಶ್ರೀಮತಿ ಪದ್ಮಾ ಆರ್. ಶೆಟ್ಟಿ ಮತ್ತು ಕಟ್ಟಬೀಡು ಕುಟುಂಬಸ್ಥರು, ಎನ್ .ಜಿ ಲೋಕನಾಥ ರೈ, ಅಲೆಂಗಾರ ರಘುನಾಥ ರೈ ಕಟ್ಟಬೀಡು, ಊರ ಹಾಗೂ ಪರ-ಊರ ಭಕ್ತಾದಿಗಳು ಉಪಸ್ಥಿತರಿದ್ದರು.




Post a Comment

0 Comments