ಬೆಂಗಳೂರು: ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ 12ನೇ ಸೀಸನ್‌ಗೆ ಮತ್ತೊಬ್ಬ ಸ್ಪರ್ಧಿಯ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಈಗಾಗಲೇ ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರ ಹೆಸರನ್ನು ಕಲರ್ಸ್ ಕನ್ನಡ ವಾಹಿನಿ ಘೋಷಿಸಿದ್ದರೆ, ಇದೀಗ ನಾಲ್ಕನೇ ಸ್ಪರ್ಧಿಯಾಗಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಕಾಲಿಟ್ಟಿದ್ದಾರೆ.
ಮೂಲತಃ ಮಂಗಳೂರಿನವರಾದ ರಕ್ಷಿತಾ ಶೆಟ್ಟಿ ಮುಂಬೈನಲ್ಲಿ ಬೆಳೆದವರು. ಬಿಬಿಎಂ ಪದವಿ ಪಡೆದಿರುವ ಇವರು ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿಯೂ ಹೆಸರಾಗಿದ್ದಾರೆ.
ಅಷ್ಟೇ ಅಲ್ಲ, ರಕ್ಷಿತಾ ಶೆಟ್ಟಿ ಜನಪ್ರಿಯ ಯೂಟ್ಯೂಬರ್ / ವ್ಲಾಗರ್ ಕೂಡ ಹೌದು. ತಮ್ಮ “Rakshita Talks” ಯೂಟ್ಯೂಬ್ ಚಾನಲ್ ಮೂಲಕ ಅವರು ತುಳು ಮತ್ತು ಕನ್ನಡದಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದು, ದೈನಂದಿನ ಬದುಕು ಹಾಗೂ ವಿಭಿನ್ನ ಅನುಭವಗಳನ್ನು ವ್ಲಾಗ್‌ಗಳ ಮೂಲಕ ಪ್ರೇಕ್ಷಕರಿಗೆ ತಲುಪಿಸುತ್ತಿದ್ದಾರೆ.
ರಂಗು-ರಂಗಿನ ಬದುಕು, ಕ್ರೀಡೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಯೊಂದಿಗೆ ಬಿಗ್ ಬಾಸ್ ಮನೆಯಲ್ಲಿ ಕಾಲಿಟ್ಟಿರುವ ರಕ್ಷಿತಾ ಶೆಟ್ಟಿ, ಹೇಗೆ ಆಡುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166



0 Comments