ಉಡುಪಿಯಲ್ಲಿ ಹಾಡಹಗಲೇ ಬಸ್ ಮಾಲೀಕ ಹಾಗೂ ರೌಡಿಶೀಟರ್ ಸೈಫುದ್ದೀನ್ ಅವರನ್ನು ಮಲ್ಪೆ ಸಮೀಪದ ಕೊಡವೂರಿನ ಮನೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮಾಹಿತಿಯಂತೆ, ಕೊಡವೂರಿನ ಮನೆಯೊಂದರಲ್ಲಿ ಮೊದಲಿಗೆ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ, ನಂತರ ತಲವಾರಿನಿಂದ ಕೊಚ್ಚಿ ಸೈಫುದ್ದೀನ್ ಅವರನ್ನು ಕೊಲೆಗೈಯಲಾಗಿದೆ. ಈ ಕುರಿತು ಸೈಫುದ್ದೀನ್ ಅವರ ಸಹಚರರೇ ಹತ್ಯೆ ನಡೆಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166



0 Comments