ಯುವಶಕ್ತಿ ಫ್ರೆಂಡ್ಸ್ (ರಿ.) ಕೆಲಂಬೀರಿ ವತಿಯಿಂದ ಭರ್ಜರಿ ಕ್ರೀಡಾಕೂಟ ಕುದ್ಮಾರು, ಯುವಶಕ್ತಿ ಫ್ರೆಂಡ್ಸ್ (ರಿ.) ಕೆಲಂಬೀರಿ ವತಿಯಿಂದ ಅಕ್ಟೋಬರ್ 4, 2025 ರಂದು ಕುದ್ಮಾರು ಗ್ರಾಮದ ಯುವಶಕ್ತಿ ಕ್ರೀಡಾಂಗಣದಲ್ಲಿ ಒಂದು ದಿನದ ವಿಜೃಂಭಣೆಯ ಪ್ರೋ-ವಾಲಿಬಾಲ್ ಪಂದ್ಯಾಟವನ್ನು ನಡೆಸಲಾಗಿದೆ. ಈ ಕ್ರೀಡಾಕೂಟವು ನಾಡಿನ ವಾಲಿಬಾಲ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಲಿದೆ.
ಪಂದ್ಯಾಟದ ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
* ಪ್ರಥಮ ಬಹುಮಾನ: ರೂ. 8000/- (ಕೊಡುಗೆ: ಹೋಟೆಲ್ ಸುರಭಿ ಗ್ರೂಫ್, ಯುವಶಕ್ತಿ ಟ್ರೋಪಿ ಕೊಡುಗೆ: ಮುಳಿಯ ಜ್ಯೂವೆಲ್ಸ್, ಪುತ್ತೂರು)
* ದ್ವಿತೀಯ ಬಹುಮಾನ: ರೂ. 6000/- (ಕೊಡುಗೆ: ಸುಪ್ರೀತ್ ಜೈನ್, ಬೆಳಂದೂರುಗುತ್ತು, ಯುವಶಕ್ತಿ ಟ್ರೋಪಿ ಕೊಡುಗೆ: ಲೋಹಿತಾಕ್ಷ ಕೆಡೆಂಜಕಟ್ಟ)
* ತೃತೀಯ ಬಹುಮಾನ: ರೂ. 4000/- (ಕೊಡುಗೆ: ಸ್ವರ್ಣಂ ಜ್ಯೂವೆಲ್ಸ್, ಸುಳ್ಯ, ಯುವಶಕ್ತಿ ಟ್ರೋಪಿ ಕೊಡುಗೆ: ಪಂಚಶ್ರೀ ಹೋಟೆಲ್, ಆಲಂಕಾರು)
* ಚತುರ್ಥ ಬಹುಮಾನ: ರೂ. 3000/- (ಕೊಡುಗೆ: ರಾಜೇಶ್ ಕೆಲಂಬೀರಿ & ಹರೀಶ್ ಬರೆಪ್ಪಾಡಿ, ಯುವಶಕ್ತಿ ಟ್ರೋಪಿ ಕೊಡುಗೆ: ಲಕ್ಷ್ಮೀ ಸೇಲ್ಸ್, ಬರೆಪ್ಪಾಡಿ)
ಬಾಲ್ ಮತ್ತು ನೆಟ್‌ಗಾಗಿ ವಿಜಯಕುಮಾರ್ ಸೊರಕೆ ಸ್ಮರಣಿಕೆ ಕೊಡುಗೆಯನ್ನು ಜಯಂತ ಸುವರ್ಣ, ಕೆಲಂಬೀರಿ ಮತ್ತು ಜಗದೀಶ್ ಅಗಳಿ ನೀಡಲಿದ್ದಾರೆ. ಜೊತೆಗೆ, ಬೆಸ್ಟ್ ಅಟ್ಯಾಕರ್, ಬೆಸ್ಟ್ ಪಾಸರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಅಬೋವ್ ಬಹುಮಾನಗಳನ್ನು ಅಶೋಕ್ ಕೆಡೆಂಜಿ ಅವರು ಪ್ರಾಯೋಜಿಸಿದ್ದಾರೆ.
ಉದ್ಘಾಟನಾ ಸಮಾರಂಭ
ಕ್ರೀಡಾಕೂಟವು ಬೆಳಿಗ್ಗೆ 11.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ (ರಿ.) ಉಪಾಧ್ಯಕ್ಷರಾದ ಶ್ರೀ ಹರೀಶ್ ಬರೆಪ್ಪಾಡಿ ವಹಿಸಲಿದ್ದಾರೆ. ಸದಾಶಿವ ದೇವಸ್ಥಾನ ಅಗಳಿಯ ಅರ್ಚಕರು ಶ್ರೀ ಈಶ್ವರಚಂದ್ರ ಭಟ್ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರು ಶ್ರೀ ಕೃಷ್ಣ ಭಟ್ಸ್ ಬರೆಪ್ಪಾಡಿ, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ತೇಜಾಕ್ಷಿ ಕೊಡಂಗೆ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯರು ಶ್ರೀ ರಾಕೇಶ್ ರೈ ಕೆಡೆಂಜಿ, ನಿವೃತ್ತ ಮುಖ್ಯ ಗುರುಗಳು ಕುಶಾಲಪ್ಪ ಗೌಡ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಊಟದ ಕೊಡುಗೆಯನ್ನು ರಾಜೇಶ್ ನೂಜಿ (ಸ್ಕಂದಶ್ರೀ) ಅವರು ನೀಡಲಿದ್ದಾರೆ.
ಸಮಾರೋಪ ಸಮಾರಂಭ
ರಾತ್ರಿ 8.00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ (ರಿ.) ಅಧ್ಯಕ್ಷರಾದ ಶ್ರೀ ರತನ್ ರೈ ಕಾರ್ಲಾಡಿ ವಹಿಸಲಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಶ್ರೀ ಈರಯ್ಯ ಪೊಲೀಸ್ ಅವರ ಗೌರವ ಉಪಸ್ಥಿತಿ ಇರುತ್ತದೆ. ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರು ಶ್ರೀ ವಿಜಯ್ ಕುಮಾರ್ ಸೊರಕೆ, ಸುರಭಿ ಬಾರ್ ಅಂಡ್ ರೆಸ್ಟೋರೆಂಟ್‌ನ ಮಾಲಕರು ಶ್ರೀ ಅಜಯ್ ಪಿ. ಸೇರಿದಂತೆ ಅನೇಕ ಅತಿಥಿಗಳು ಭಾಗವಹಿಸಲಿದ್ದಾರೆ.
ಕ್ರೀಡಾಕೂಟಕ್ಕೆ ರಾಷ್ಟ್ರ ಮಟ್ಟದ ಖ್ಯಾತಿಯ ವೀಕ್ಷಕ ವಿವರಣೆಗಾರರಾದ ದಣಿವರಿಯದ ಮಾತಿನ ಮಾಣಿಕ್ಯ ಶ್ರೀ ಗಣೇಶ್ ನಡುವಾಲ್, ಕವಿಗಳೆ ನಾಚುವ ಕವಿಗಾರ ಸಾವಿರ ಕವನಗಳ ಸರದಾರ ಶ್ರೀ ಸಲೀಂ ರಾಮಕುಂಜ, ಮತ್ತು ಶ್ರೀ ನಾಗೇಶ್ ಪಳ್ಳಿ ಧ್ವನಿ ನೀಡಲಿದ್ದಾರೆ.
ರಾಷ್ಟ್ರೀಯ ವಾಲಿಬಾಲ್ ರೆಫ್ರಿ ಶ್ರೀ ಮೋಹಿತ್ ಏನೇಕಲ್, ರಾಜ್ಯ ವಾಲಿಬಾಲ್ ರೆಫ್ರಿಗಳಾದ ಶ್ರೀ ಅನೂಪ್ ಪೆರಿಗೇರಿ ಮತ್ತು ಶ್ರೀ ಪ್ರವೀಣ್ ಕುಮಾರ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments