ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು ಹಾಗು ಮಂಗಳೂರು ನಡುವೆ ಹೆಚ್ಚಿನ ಜನ ಸಂಚಾರವಿದ್ದ ಕಾರಣ ಹಾಗು ಖಾಯಂ ರೈಲುಗಳು ಭರ್ತಿಯಾಗಿ ಓಡುತ್ತಿರುವುದನ್ನು ಗಮನಿಸಿದ ಜಿಲ್ಲೆಯ ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿಗಳು ಈ ಮೊದಲು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿತ್ತು. ಇದರ ಫಲಿವಾಗಿ ನೈರುತ್ಯ ರೈಲ್ವೆ ವಲಯವು ಎರಡು ವಿಶೇಷ ರೈಲುಗಳು ಘೋಷಣೆಯಾಗಿತ್ತು. ಈ ಎರಡು ರೈಲುಗಳಿಗೂ ಉತ್ತಮ ಸ್ಪಂದನೆ ದೊರಕಿದೆ. ದಸರಾ ಹಬ್ಬ ಹಾಗು ಸಾಲು ಸಾಲು ರಜೆಗಳಿಂದಾಗಿ ವಾರಾಂತ್ಯ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರೈಲುಗಳು, ಬಸ್ಸುಗಳಲ್ಲಿ ಹೆಚ್ಚು ಜನದಟ್ಟನೆಯಿರುವ ಕಾರಣ ಮತ್ತೊಂದು ವಿಶೇಷ ರೈಲಿನ ಅಗತ್ಯವಿತ್ತು. ಇದನ್ನು ಮನಗಂಡ ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿಗಳು ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗಕ್ಕೆ ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ದಕ್ಷಿಣ ರೈಲ್ವೆ ವಲಯವು ಇದೀಗ ಅ.5ರಂದು ಮಂಗಳೂರು ಸೆಂಟ್ರಲಿನಿಂದ ಹಾಸನ,ಯಶವಂತಪುರ,ಕಾಚೆಗುಡ ಮಾರ್ಗವಾಗಿ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಘೋಷಿಸಿದೆ!
ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲಿ ಲಭಿಸಲಿದೆ. ಈ ವಿಶೇಷ ರೈಲು ಸಿಗುವಲ್ಲಿ ಪಾಲಕ್ಕಾಡ್ ವಿಭಾಗದ ಅಧಿಕಾರಿಗಳು ಹಾಗು ಮಂಗಳೂರಿನ ಹಿರಿಯ ರೈಲ್ವೆ ಅಧಿಕಾರಿಗಳ ಶ್ರಮ ಬಹಳಷ್ಟಿದೆ.

.jpg)
.jpg)
0 Comments