ಮಂಗಳೂರು ಕುದ್ರೋಳಿ ದಸರಾ – ಇಂದು ವೈಭವದ ಶೋಭಾಯಾತ್ರೆ ಮೆರವಣಿಗೆ ಮಾರ್ಗಸೂಚಿ

 



ಮಂಗಳೂರು: ದಸರಾ ಹಬ್ಬದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವೈಭವಮಯ ಶೋಭಾಯಾತ್ರೆ ಇಂದು ಸಂಜೆ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಸಾವಿರಾರು ಭಕ್ತರ ಸಮೂಹ, ನೂರಾರು ಕಲಾತಂಡಗಳು ಹಾಗೂ ಸಾಂಸ್ಕೃತಿಕ ಟ್ಯಾಬ್ಲೋಗಳೊಂದಿಗೆ ಮಂಗಳೂರು ನಗರದ ಬೀದಿಗಳು ಭಕ್ತಿ-ಸಾಂಸ್ಕೃತಿಕ ಮೆರವಣಿಗೆಗೆ ಸಾಕ್ಷಿಯಾಗಲಿವೆ.

ನಗರದಾದ್ಯಂತ ಸಾವಿರಾರು ಭಕ್ತರು, ನೂರಾರು ಕಲಾತಂಡಗಳು ಹಾಗೂ ಅಲಂಕೃತ ಟ್ಯಾಬ್ಲೋಗಳೊಂದಿಗೆ ಮೆರವಣಿಗೆಯು ನಡೆಯಲಿದ್ದು, ಹುಲಿವೇಷ, ಕರಡಿಯ ವೇಷ, ಯಕ್ಷಗಾನ, ಭಜನಾ ಹಾಗೂ ನೃತ್ಯಗೋಷ್ಠಿಗಳ ಸಾಂಸ್ಕೃತಿಕ ಸಡಗರವು ಶೋಭಾಯಾತ್ರೆಗೆ ಇನ್ನಷ್ಟು ಕಳೆ ಹೆಚ್ಚಿಸಲಿದೆ.

ಶೋಭಾಯಾತ್ರೆ ಸುಗಮವಾಗಿ ಸಾಗಲು ಕ್ಷೇತ್ರಾಡಳಿತ ಮಾರ್ಗಸೂಚಿ ಹೊರಡಿಸಿದೆ


ಸಂಜೆ 4.00 ಗಂಟೆಗೆ ಶೋಭಾಯಾತ್ರೆ ಪ್ರಾರಂಭ

 6.00 ಗಂಟೆಗೆ ಶಾರದೆ ರಥದಲ್ಲಿ ಕುಳಿತು ಪೇಟೆ ಸವಾರಿ

 8.00 ಗಂಟೆಗೆ ಶಾರದೆ ನಾರಾಯಣಗುರು ವೃತ್ತ ದಾಟುವುದು

9.00 ಗಂಟೆಗೆ ಸಾಯಿಬೀನ್

 10.00 ಗಂಟೆಗೆ ಬೆಸೆಂಟ್ ಜಂಕ್ಷನ್

11.00 ಗಂಟೆಗೆ ಸಿಟಿ ಪಾಯಿಂಟ್

12.00 ಗಂಟೆಗೆ ಹಂಪನಕಟ್ಟೆ ಜಂಕ್ಷನ್

1.00 ಗಂಟೆಗೆ ರಥಬೀದಿ (ಕಾರ್ ಸ್ಟ್ರೀಟ್)

 2.00 ಗಂಟೆಗೆ ಅಳಕೆ

2.30 ಗಂಟೆಯೊಳಗೆ ಪ್ರಧಾನ ದ್ವಾರದೊಳಗೆ ಶಾರದೆಯ ಮರುಪ್ರವೇಶ


ಈ ಸಮಯಕ್ಕೆ ತಕ್ಕಂತೆ ಉಳಿದ ಟ್ಯಾಬ್ಲೋಗಳು ಜೋಡಿಸಿಕೊಂಡು ಹಿಂದಿನಿಂದ ಬರಬೇಕು.

ಮೆರವಣಿಗೆ ಕೊನೆಯ ಟ್ಯಾಬ್ಲೋ ರಾತ್ರಿ 12.30ರೊಳಗೆ ಪಿವಿಎಸ್ ಜಂಕ್ಷನ್ ದಾಟಬೇಕಾಗಿದೆ


ವೈಭವದ ಶೋಭಾಯಾತ್ರೆಯ ಸಂಚಾಲಕರಾದ ಪದ್ಮರಾಜ್ ಆರ್. ಪೂಜಾರಿ ಅವರ ಮಾರ್ಗದರ್ಶನದಂತೆ ಮೆರವಣಿಗೆ ಸಮಿತಿ ಈ ಮಾರ್ಗಸೂಚಿ ರಚಿಸಿದ್ದು, ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕ್ಷೇತ್ರಾಡಳಿತ ಮಂಡಳಿ ತಿಳಿಸಿದೆ.

Post a Comment

0 Comments