ಕೇಂದ್ರ ಸಚಿವರ ಇ-ಮೇಲ್ ಐಡಿ ಜೊಹೊಗೆ ವರ್ಗಾವಣೆ: 'ಸ್ವದೇಶಿ' ಇಮೇಲ್ ಸೇವೆಗೆ ಭಾರಿ ಉತ್ತೇಜನ

 

Ad
ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ತಾವು ಜೊಹೊ ಮೇಲ್‌ಗೆ ತಮ್ಮ ಮೇಲ್ ಐಡಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

Ad

ದೇಶಾದ್ಯಂತ ಜೋಹೋ ಮೇಲ್ ಗೆ ವರ್ಗಾವಣೆಗೊಳ್ಳುವುದಕ್ಕೆ ಕೇಂದ್ರ ಸರ್ಕಾರದ ಅನೇಕ ಸಚಿವರು ಸಾರ್ವಜನಿಕರಿಗೂ ಕರೆ ನೀಡಿದ್ದಾರೆ. ಈ ಬೆನ್ನಲ್ಲೇ ಸ್ವದೇಶಿ ಇಮೇಲ್ ಸೇವೆಗೆ ಪ್ರಮುಖ ಉತ್ತೇಜನ ದೊರೆತಿದ್ದು, ಡಿಜಿಟಲ್ ಸ್ವಾವಲಂಬನೆಯತ್ತ ಗಮನಾರ್ಹ ಮುನ್ನಡೆಯನ್ನು ಸೂಚಿಸುತ್ತಿದೆ.

ಅಕ್ಟೋಬರ್ 8 ರಂದು ತಮ್ಮ ಹೊಸ ಇಮೇಲ್ ವಿಳಾಸ amitshah.bjp@zohomail.in ನ್ನು ಘೋಷಿಸಿದ ಕೇಂದ್ರ ಗೃಹ ಶಾ, Gmail ನಂತಹ ಜಾಗತಿಕ ಸೇವೆಗಳಿಗೆ ಜಾಹೀರಾತು-ಮುಕ್ತ, ಗೌಪ್ಯತೆ-ಕೇಂದ್ರಿತ ಪರ್ಯಾಯವನ್ನು ನೀಡುವ ಚೆನ್ನೈ ಮೂಲದ ವೇದಿಕೆಯನ್ನು ಅಳವಡಿಸಿಕೊಳ್ಳುವಂತೆ ದೇಶದ ಜನತೆಯನ್ನು ಒತ್ತಾಯಿಸಿದ್ದಾರೆ.

ಈ ಕ್ರಮ ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ' ಮತ್ತು 'ಡಿಜಿಟಲ್ ಇಂಡಿಯಾ' ಉಪಕ್ರಮಗಳೊಂದಿಗೆ ಹೊಂದಿಕೆಯಾಗುತ್ತದೆ. ಇದು ಅಮೆರಿಕದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಸ್ಥಳೀಯ ತಂತ್ರಜ್ಞಾನವನ್ನು ಬಳಸಲು ಪ್ರೋತ್ಸಾಹಿಸುತ್ತದೆ.

ಅಮೆರಿಕ-ಭಾರತದ ನಡುವಿನ ಈ ಉದ್ವಿಗ್ನತೆಗಳಲ್ಲಿ ಸುಂಕ ಹೆಚ್ಚಳ ಮತ್ತು ಭಾರತೀಯ ವೃತ್ತಿಪರರು ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಕಠಿಣ H-1B ವೀಸಾ ನಿಯಮಗಳು ಸೇರಿವೆ. 1996 ರಲ್ಲಿ ಸ್ಥಾಪನೆಯಾದ ಜೊಹೊ, ಅದರ ಬಲವಾದ ಡೇಟಾ ಭದ್ರತೆ, ಗೌಪ್ಯತೆ ಮತ್ತು ವ್ಯವಹಾರ ಸ್ನೇಹಿ ವೈಶಿಷ್ಟ್ಯಗಳಿಗಾಗಿ ಸ್ಥಿರವಾಗಿ ಜನಪ್ರಿಯತೆಯನ್ನು ಗಳಿಸಿದೆ.

Post a Comment

0 Comments